ವಿಜಯ ಸುಂದರ್ ಪ್ರಶಾಂತ್ ಮತ್ತು ಅರ್ಜುನ್ ಖಾಡೆ
ನವದೆಹಲಿ: ಭಾರತದ ಅರ್ಜುನ್ ಖಾಡೆ ಮತ್ತು ವಿಜಯ ಸುಂದರ್ ಪ್ರಶಾಂತ್ ಜೋಡಿಯು ಸ್ವಿಜರ್ಲೆಂಡ್‌ನ ಸ್ಟಾದ್‌ನಲ್ಲಿ ನಡೆಯುತ್ತಿರುವ ಸ್ವಿಸ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತು.
ಖಾಡೆ–ಪ್ರಶಾಂತ್ ಜೋಡಿಯು ಶುಕ್ರವಾರ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಅಲ್ಬಾನೊ ಒಲಿವೆಟ್ಟಿ (ಫ್ರಾನ್ಸ್) ಹಾಗೂ ಹೆಂಡ್ರಿಕ್ ಜೆಬೆನ್ಸ್ (ಜರ್ಮನಿ) ಜೋಡಿ ಎದುರು 5–7, 5–7ರಿಂದ ನೇರ ಸೆಟ್‌ಗಳಿಂದ ಮಣಿಯಿತು. ಈ ಮೂಲಕ, ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.
ಎಟಿಪಿ 250 ಮಟ್ಟದ ಈ ಟೂರ್ನಿಯು ಒಟ್ಟು ₹6 ಕೋಟಿ ಬಹುಮಾನ ಹೊಂದಿದೆ. ಖಾಡೆ ಅವರು ಈ ಹಿಂದೆ ಒಂದು ಎಟಿಪಿ ಪ್ರಶಸ್ತಿ ಗೆದ್ದಿದ್ದರು. ಖಾಡೆ– ರಿತ್ವಿಕ್ ಬೊಲ್ಲಿಪಳ್ಳಿ ಜೋಡಿಯು ಅಲ್ಮಾಟಿ ಎಟಿಪಿ 250 ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.