ADVERTISEMENT

ಕಲಬುರಗಿ ಓಪನ್ ಐಟಿಎಫ್‌ ಪುರುಷರ ಟೆನಿಸ್ ಟೂರ್ನಿ: ಆರ್ಯನ್‌ ಶಾ, ಅರ್ಜುನ್‌ ಜಯಭೇರಿ

ಬಸವರಾಜ ದಳವಾಯಿ
Published 26 ನವೆಂಬರ್ 2023, 19:48 IST
Last Updated 26 ನವೆಂಬರ್ 2023, 19:48 IST
<div class="paragraphs"><p>ಭಾರತದ ಆರ್ಯನ್ ಶಾ ಆಟದ ವೈಖರಿ</p></div>

ಭಾರತದ ಆರ್ಯನ್ ಶಾ ಆಟದ ವೈಖರಿ

   

– ಪ್ರಜಾವಾಣಿ ಚಿತ್ರ /ತಾಜುದ್ದೀನ್ ಆಜಾದ್‌

ಕಲಬುರಗಿ: ಅಂಕಣದಲ್ಲಿ ಚುರುಕಿನ ಓಡಾಟ ಹಾಗೂ ಬಿರುಸಿನ ಹೊಡೆತಗಳಿಂದ ಮಿಂಚಿದ ಭಾರತದ ಆರ್ಯನ್‌ ಶಾ ಅವರು ಭಾನುವಾರ ಇಲ್ಲಿ ಆರಂಭವಾದ ಕಲಬುರಗಿ ಓಪನ್ ಪುರುಷರ ಐಟಿಎಫ್‌ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಜಯ ಗಳಿಸಿದರು.

ADVERTISEMENT

ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ದಿನ, ಸಿಂಗಲ್ಸ್ ವಿಭಾಗದ ಅರ್ಹತಾ ಸುತ್ತಿನ ಮೊದಲ ಹಣಾಹಣಿಯಲ್ಲಿ ಆರ್ಯನ್ ಶಾ 6–2, 4–6, 10–7ರಿಂದ ಸ್ವದೇಶದ ಸಾರ್ಥಕ್ ಸುದೆನ್ ಅವರನ್ನು ಸೋಲಿಸಿದರು. 18 ವರ್ಷದ ಆರ್ಯನ್‌ ಅವರ ವೇಗದ ಸರ್ವ್‌ಗಳೂ ಆಕರ್ಷಕವಾಗಿದ್ದವು.

ಅರ್ಹತಾ ಸುತ್ತಿನ ಇನ್ನುಳಿದ ಮೊದಲ ಪಂದ್ಯಗಳಲ್ಲಿ ಭಾರತದ ಅರ್ಜುನ್ ಮಹದೇವನ್‌ 6–0, 6–0ರಿಂದ ಇಶಾನ್ ಖದೀರ್ ವಿರುದ್ಧ, ಮುನಿ ಅನಂತ ಮಣಿ 6–4, 6–3ರಿಂದ ರಿಷಿತ್ ದಾಖನೆ ಎದುರು, ಅಜಯ್ ಮಲಿಕ್‌ 6–3, 7–5ರಿಂದ ತರುಣ್ ವಿರುದ್ಧ, ಸಂದೇಶ್‌ ದತ್ತಾತ್ರೇಯ ಕುರಳೆ 6–4, 6–3ರಿಂದ ಮಾನವ್ ಜೈನ್ ಎದುರು, ಯಶ್ ಯಾದವ್‌ 6–1, 6–2ರಿಂದ ಅನುಜ್ ಮಾನ್ ಎದುರು, ಪಾರ್ಥ್ ಅಗರವಾಲ್ 7–6, 6–2ರಿಂದ ದೀಪಕ್ ಅನಂತರಾಮು ಎದುರು, ಧ್ರುವ ಹಿರ್ಪಾರ 6–3, 7–6 (5)ರಿಂದ ಅಮೆರಿಕದ ವಿಕ್ರಮಜೀತ್ ಚಾವ್ಲಾ ಎದುರು ಗೆಲುವು ಸಾಧಿಸಿದರು. 

ಓಜಸ್‌ ತೇಜೊ ಜಯಪ್ರಕಾಶ್‌ 4–6, 6–1,10–4ರಿಂದ ಲೋಹಿತಾಕ್ಷ ಬದರಿನಾಥ್ ಎದುರು, ತುಷಾರ್ ಮದನ್‌ 6–4, 6–1ರಿಂದ ಆದಿತ್ಯ ವರ್ಧನ್ ದುಡ್ಡುಪುಡಿ ವಿರುದ್ಧ, ಜಯ ಗಳಿಸಿ ಅರ್ಹತಾ ಸುತ್ತಿನ ಎರಡನೇ ಹಂತಕ್ಕೆ ಪ್ರವೇಶಿಸಿದರು. ಶಿವಾಂಕ್ ಭಟ್ನಾಗರ್ ಹಾಗೂ ಕರ್ನಾಟಕದ ರಿಷಿ ರೆಡ್ಡಿ ಅವರಿಗೆ ಬೈ ಲಭಿಸಿತು.

ಭಾರತದ ಆರ್ಯನ್ ಶಾ ಆಟದ ವೈಖರಿ– ಪ್ರಜಾವಾಣಿ ಚಿತ್ರ /ತಾಜುದ್ದೀನ್ ಆಜಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.