ADVERTISEMENT

ಕೋವಿಡ್‌–19 | ದೇಣಿಗೆ ಸಂಗ್ರಹಿಸಲು ಆನ್‌ಲೈನ್‌ ಚೆಸ್‌ ಟೂರ್ನಿ

ಮೇ 2, 3ರಂದು ಟೂರ್ನಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 19:30 IST
Last Updated 27 ಏಪ್ರಿಲ್ 2020, 19:30 IST
   

ಬೆಂಗಳೂರು: ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಟಕ್ಕೆ ಹಣ ಸಂಗ್ರಹಿಸಲು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮೇ 2 ಮತ್ತು 3ರಂದು ಆನ್‌ಲೈನ್‌ ಚೆಸ್‌ ಟೂರ್ನಿಯನ್ನು ಏರ್ಪಡಿಸಿದೆ.

ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆ (ಯುಕೆಸಿಎ) ಮತ್ತು ಬೆಂಗಳೂರಿನ ಗೇಮಿಂಗ್‌ ವೇದಿಕೆಯಾದ ಮೊಬೈಲ್‌ ಪ್ರೀಮಿಯರ್‌ ಲೀಗ್‌ (ಎಂಪಿಎಲ್‌) ಸಹಯೋಗದಲ್ಲಿ ಟೂರ್ನಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಎಂಪಿಎಲ್‌ ಆ್ಯಪ್‌ನಲ್ಲಿ ಟೂರ್ನಿಯ ನಡೆಯಲಿದೆ. ಟೂರ್ನಿಯ ಮೂಲಕ ಸಂಗ್ರಹವಾದ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಗುವುದು.

ADVERTISEMENT

‘ಚೆಸ್‌ ಆಟಗಾರರು ಉದಾರವಾಣಿ ದೇಣಿಗೆ ನೀಡುವಂತೆ ಮತ್ತು ಆ ಮೂಲಕ ಕೋವಿಡ್‌–19ಗೆ ಚೆಕ್‌ಮೇಟ್‌ ಮಾಡುವಂತೆ’ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ಮನವಿ ಮಾಡಿದ್ದಾರೆ.

ಭಾರತದ ಯಾವುದೇ ಆಟಗಾರ ಟೂರ್ನಿಯಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕ ₹ 50. ಒಟ್ಟು ಬಹುಮಾನದ ಮೊತ್ತ ₹ 10 ಲಕ್ಷ. ವಿಜೇತ ಆಟಗಾರ ₹ 1 ಲಕ್ಷ ಪಡೆಯಲಿದ್ದಾರೆ. ಎಂಪಿಎಲ್‌ ಆ್ಯಪ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.