ADVERTISEMENT

ಹಾಕಿ: ಕ್ವಾರ್ಟರ್‌ಫೈನಲ್‌ಗೆ ಕರ್ನಾಟಕ ತಂಡ

ಪಿಟಿಐ
Published 18 ಆಗಸ್ಟ್ 2025, 16:06 IST
Last Updated 18 ಆಗಸ್ಟ್ 2025, 16:06 IST
<div class="paragraphs"><p>ಹಾಕಿ</p></div>

ಹಾಕಿ

   

ಜಲಂಧರ್‌: ಕರ್ನಾಟಕ ತಂಡವು ಇಲ್ಲಿ ನಡೆಯುತ್ತಿರುವ 15ನೇ ಹಾಕಿ ಇಂಡಿಯಾ ಜೂನಿಯರ್‌ ಪುರುಷರ ಚಾಂಪಿಯನ್‌ಷಿಪ್‌ ಟೂರ್ನಿಯ ‘ಎ’ ಡಿವಿಷನ್‌ನಲ್ಲಿ ಸೋಮವಾರ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ಸೋಮವಾರ ನಡೆದ ಎ ಡಿವಿಷನ್‌ನ ಗುಂಪು ಹಂತದ ಪಂದ್ಯಗಳಲ್ಲಿ ಒಡಿಶಾ ತಂಡವು 10–0ಯಿಂದ ಆಂಧ್ರಪ್ರದೇಶ ವಿರುದ್ಧ;  ಜಾರ್ಖಂಡ್‌ ತಂಡವು 5–3ರಿಂದ ಮಹಾರಾಷ್ಟ್ರ ವಿರುದ್ಧ ಗೆಲುವು ಸಾಧಿಸಿದವು. ಮಧ್ಯಪ್ರದೇಶ ಹಾಗೂ ತಮಿಳುನಾಡು ನಡುವಿನ ಪಂದ್ಯವು 3–3ರಿಂದ ಡ್ರಾ ಆಯಿತು.

ADVERTISEMENT

ಅದರೊಂದಿಗೆ, ಕರ್ನಾಟಕ, ಆತಿಥೇಯ ಪಂಜಾಬ್‌, ಮಧ್ಯಪ್ರದೇಶ, ಉತ್ತರಪ್ರದೇಶ, ಜಾರ್ಖಂಡ್‌, ಹರಿಯಾಣ, ಮಣಿಪುರ ಹಾಗೂ ಒಡಿಶಾ ತಂಡಗಳು ಎಂಟರ ಸುತ್ತಿಗೆ ಅರ್ಹತೆ ಪಡೆದುಕೊಂಡವು. ಕ್ವಾರ್ಟರ್‌ಫೈನಲ್‌ ಪಂದ್ಯಗಳು ಬುಧವಾರ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.