ADVERTISEMENT

ರಾಜ್ಯ ಹಾಕಿ ತಂಡದ ಮಾಜಿ ಆಟಗಾರ ಮಂಗಳರಾಜ್‌ ನಿಧನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 14:16 IST
Last Updated 1 ಮಾರ್ಚ್ 2026, 14:16 IST
ಎಸ್‌.ಮಂಗಳರಾಜ್‌
ಎಸ್‌.ಮಂಗಳರಾಜ್‌   

ಬೆಂಗಳೂರು: ಕರ್ನಾಟಕ ಹಾಕಿ ತಂಡದ ಮಾಜಿ ಆಟಗಾರ ಎಸ್‌.ಮಂಗಳರಾಜ್‌ (84) ಅವರು ಅನಾರೋಗ್ಯದಿಂದಾಗಿ ಗುರುವಾರ ನಿಧನರಾದರು. ಅವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ (ಕೆಎಸ್‌ಎಚ್‌ಎ) ಉಪಾಧ್ಯಕ್ಷ ಎಸ್‌.ನಿಕೋಲಸ್‌ ಅವರ ಹಿರಿಯ ಸಹೋದರ.

ಫಾರ್ವರ್ಡ್‌ ಆಟಗಾರನಾಗಿದ್ದ ಮಂಗಳರಾಜ್‌ ಅವರು 1960ರ ದಶಕದಲ್ಲಿ ರಾಜ್ಯ ಹಾಕಿ ತಂಡದಲ್ಲಿ ಆಡಿದ್ದರು. ಕೆಎಸ್‌ಎಚ್‌ಎ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಗವಿಪುರಂ ಹಾಕಿ ಕ್ಲಬ್‌ ಹಾಗೂ ಎಚ್‌ಎಎಲ್‌ ಕ್ಲಬ್‌ ತಂಡಗಳನ್ನು ಪ್ರತಿನಿಧಿಸಿದ್ದರು. ಮುಸ್ಲಿಂ ಸ್ಪೋರ್ಟ್ಸ್‌ ಕ್ಲಬ್‌ ಪರ ಫುಟ್‌ಬಾಲ್ ಹಾಗೂ ಕೋಲ್ಟ್ಸ್‌ ಕ್ಲಬ್‌ ಪರ ಕ್ರಿಕೆಟ್‌ ಆಡಿ, ಬಹುಮುಖ ಪ್ರತಿಭೆಯನ್ನು ತೋರಿದ್ದರು.

ಎಚ್‌ಎಎಲ್‌ನಲ್ಲಿ ಉದ್ಯೋಗಿಯಾಗಿದ್ದ ಅವರು, ನಿವೃತ್ತಿಯ ಬಳಿಕ ರಾಜ್ಯ ಮಹಿಳಾ ಹಾಕಿ ತಂಡದ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.