
ತುಮಕೂರು: ಬೆಂಗಳೂರಿನ ರಿಯಾ ಬಾಫಣಾ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ಒಲಿಂಪಿಕ್ ಕೂಟದ ನಡೆದ ರಿಧಮಿಕ್ ಜಿಮ್ನಾಸ್ಟಿಕ್ಸ್‌ನಲ್ಲಿ ಐದು ಚಿನ್ನದ ಪದಕ ಪಡೆದು ದಾಖಲೆ ಬರೆದರು. ಮಾನ್ಯಾ ಪಿ.ರೆಡ್ಡಿ ನಾಲ್ಕು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಮಂಗಳವಾರ ನಡೆದ ಮಹಿಳೆಯರ 10 ಸಾವಿರ ಮೀಟರ್ಸ್ ಓಟದಲ್ಲಿ ಹುಬ್ಬಳ್ಳಿಯ ಎಸ್.ಡಿ. ಶಾಹಿನ್ ವೇಗದ ಓಟಗಾರ್ತಿಯಾಗಿ ಹೊರಹೊಮ್ಮಿದರು. ಪುರುಷರ ವಿಭಾಗದಲ್ಲಿ ತುಮಕೂರಿನ ಟಿ.ಸಿ.ಸಂದೀಪ್, ಎಲ್.ರಘುವೀರ್, ಎಚ್.ಎ.ದರ್ಶನ್ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.
ಜಿಮ್ನಾಸ್ಟಿಕ್ಸ್: ಬಾಲಕಿಯರ ಆಲ್‌ರೌಂಡ್ ವಿಭಾಗ ಮತ್ತು ಹೂಪ್/ಬಾಲ್/ಕ್ಲಬ್ಸ್/ರಿಬ್ಬನ್: ರಿಯಾ ಬಾಫಣಾ (ಬೆಂಗಳೂರು)–1, ಮಾನ್ಯಾ ಪಿ.ರೆಡ್ಡಿ (ಬೆಂಗಳೂರು)–2, ಅನು ಎ.ಮುತಂಗಿ (ಧಾರವಾಡ)–3
ಅಥ್ಲೆಟಿಕ್ಸ್: ಮಹಿಳೆಯರು: 10 ಸಾವಿರ ಮೀ ಓಟ: ಎಸ್.ಡಿ.ಶಾಹಿನ್ (ಹುಬ್ಬಳ್ಳಿ)–1, ಯುವರಾಣಿ (ರಾಯಚೂರು)–2, ಪ್ರವಲಿಕಾ (ಬೆಂಗಳೂರು ನಗರ)–3.
1,500 ಮೀ ಓಟ: ಎಚ್.ವಿ.ದೀಕ್ಷಾ (ಶಿವಮೊಗ್ಗ)–1, ಪ್ರಣತಿ (ಬೆಂಗಳೂರು ಗ್ರಾಮಾಂತರ)–2, ದೀಪಾ (ವಿಜಯಪುರ)–3. 400 ಮೀ: ಶ್ರಾವಣಿ ಬಾಟೆ (ದಕ್ಷಿಣ ಕನ್ನಡ)–1, ರೇಖಾ ಬಸಪ್ಪ ಪಿರೊಜಿ (ದಕ್ಷಿಣ ಕನ್ನಡ)–2, ಗೀತಾ ಬಿ.ಚೌಕಾಶಿ (ದಕ್ಷಿಣ ಕನ್ನಡ)–3. 100 ಹರ್ಡಲ್ಸ್: ಇಶಾ ಎಲಿಜಬೆತ್ ರಂಜಿತ್ (ಬೆಂಗಳೂರು ನಗರ)–1, ಅಪೂರ್ವಾ ಆನಂದ್ ನಾಯ್ಕ್ (ಬೆಳಗಾವಿ)–2, ಸಾಕ್ಷಿ ಕ್ರಿಸ್ಟಿನ ಕಾರ್ಕಡ (ದಕ್ಷಿಣ ಕನ್ನಡ)–3. ಟ್ರಿಪಲ್ ಜಂಪ್: ಯು.ನಿತ್ಯಾಶ್ರೀ (ಬೆಂಗಳೂರು ಗ್ರಾಮಾಂತರ)–1, ಸ್ಮಿತಾ ಕಾಕಟ್ಕರ್ (ಬೆಳವಾವಿ)–2.
ಡಿಸ್ಕಸ್ ಥ್ರೋ: ಮಾಧುರ್ಯ (ಉಡುಪಿ)–1, ಬಿ.ಸುಷ್ಮಾ (ದಕ್ಷಿಣ ಕನ್ನಡ)–2, ಎಂ.ಬಿ.ಐಶ್ವರ್ಯಾ (ದಕ್ಷಿಣ ಕನ್ನಡ)–3. ಶಾಟ್‌ಪಟ್– ರೆಡ್ಡಿ ಸಂಜನಾ (ಬೆಂಗಳೂರು ನಗರ)–1, ಮಾಧುರ್ಯ (ಉಡುಪಿ)–2, ಆಕಾಂಕ್ಷಾ (ಉಡುಪಿ)–3.
ಜಾವೆಲಿನ್ ಥ್ರೋ: ಕರಿಷ್ಮಾ ಎಸ್.ಸನಿಲ್ (ದಕ್ಷಿಣ ಕನ್ನಡ)–1, ನಂದಾ ಪರಶುರಾಮ್ ಜಂಗಲಿ (ಉಡುಪಿ)–2.
4X100 ಮೀಟರ್ ರಿಲೇ– ಬೆಳಗಾವಿ–1. ದಕ್ಷಿಣ ಕನ್ನಡ–2, ಮೈಸೂರು ತಂಡ–3
110 ಮೀ ಹರ್ಡಲ್ಸ್: ರತನ್ ಗೌಡ ಪಾಟೀಲ (ಬೆಂಗಳೂರು ನಗರ)–1, ಲಬೈಕ್ ನಲಬಂದ (ಬೆಳಗಾವಿ)–2, ಸಂಜಯ್ ಈಶ್ವರ್ ಪಾಟೀಲ (ಬೆಳಗಾವಿ)–3. ಟ್ರಿಪಲ್ ಜಂಪ್– ಯಶಸ್ ಆರ್.ಗೌಡ (ಮಂಡ್ಯ)–1, ಜೆ.ಸಿ.ರಮೇಶ್ ನಾಯಕನ್ (ಮೈಸೂರು)–2, ಬಿ.ಆರ್.ಯಶಸ್ (ಬೆಂಗಳೂರು ನಗರ)–3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.