ಸಯ್ಯದ್ ಶಬೀರ್
ಬೆಂಗಳೂರು: ಕರ್ನಾಟಕದ ಸಯ್ಯದ್ ಶಬೀರ್ ಅವರು ಭುವನೇಶ್ವರದ ಕಳಿಂಗ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ 40ನೇ ಜೂನಿಯರ್ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 18 ವರ್ಷದೊಳಗಿನ ಪುರುಷರ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದರು.
ಶನಿವಾರ ನಡೆದ ಫೈನಲ್‌ನಲ್ಲಿ 17 ವರ್ಷದ ಶಬೀರ್ 47.48 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಉತ್ತರ ಪ‍್ರದೇಶದ ಅಭಯ್ ದುಬೆ (48.13) ಮತ್ತು ತಮಿಳುನಾಡಿನ ನಕುಲ್ ಪ್ರಭು (48.21) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತಮ್ಮದಾಗಿಸಿಕೊಂಡರು.
20 ವರ್ಷದೊಳಗಿನ ಪುರುಷರ 1500 ಮೀಟರ್ ಓಟದಲ್ಲಿ ಕರ್ನಾಟಕದ ರಂಗಣ್ಣ ನಾಯ್ಕರ್ (3ನಿ.49.58ಸೆ.) ಕಂಚಿನ ಪದಕ ಗೆದ್ದರು. ಆಂಧ್ರಪ್ರದೇಶದ ವೆಂಕಟರಾಮ್ ಆರ್.ಇ (3:49.02) ಚಿನ್ನ ಜಯಿಸಿದರೆ ಮತ್ತು ಉತ್ತರ ಪ್ರದೇಶದ ಹಿಮಾಂಶು ರಾಠಿ (3:49.05) ಕಂಚು ಗೆದ್ದರು.
16 ವರ್ಷದೊಳಗಿನ ಬಾಲಕಿಯರ 80 ಮೀಟರ್ ಹರ್ಡಲ್ಸ್‌ನಲ್ಲಿ ಕರ್ನಾಟಕದ ನೂಪುರ ಹೊಳ್ಳ (11.87ಸೆ.) ಕಂಚಿನ ಪದಕ ತಮ್ಮ ದಾಗಿಸಿಕೊಂಡರು. ತಮಿಳುನಾಡಿನ ವರ್ಷಿಕಾ ಬಾಲಕೃಷ್ಣ (11.67ಸೆ.), ಮಹಾರಾಷ್ಟ್ರದ ಸಾಯಿಶಾ ಪವಾರ್ (11.77ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.