ADVERTISEMENT

ವಿಶ್ವ ಕ್ರಾಸ್‌ ಕಂಟ್ರಿ: ಆರು ಮಂದಿಯ ತಂಡ ಆಯ್ಕೆ

ಪಿಟಿಐ
Published 23 ಮಾರ್ಚ್ 2024, 13:58 IST
Last Updated 23 ಮಾರ್ಚ್ 2024, 13:58 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಏಷ್ಯನ್ ಕ್ರೀಡೆಗಳಲ್ಲಿ ಬೆಳ್ಳಿ ಪದಕ ಗೆದ್ದ ಕಾರ್ತಿಕ್ ಕುಮಾರ್ ಅವರು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ಇದೇ ತಿಂಗಳ 30ರಂದು ನಡೆಯಲಿರುವ ವಿಶ್ವ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ಅಥ್ಲೆಟಿಕ್ ಫೆಡರೇಷನ್ ಶನಿವಾರ ಆರು ಸದಸ್ಯರ ತಂಡ ಪ್ರಕಟಿಸಿತು. ಕಾರ್ತಿಕ್‌ ಜೊತೆ ಏಷ್ಯನ್ ಕ್ರೀಡೆಗಳಲ್ಲಿ ಕಂಚಿನ ಪದಕ ಪಡೆದ ಗುಲ್ವೀರ್ ಸಿಂಗ್ ಮತ್ತು ರಾಷ್ಟ್ರೀಯ ಚಾಂಪಿಯನ್‌ ಹೇಮರಾಜ್ ಗುಜ್ಜಾರ್ ಅವರು ಪುರುಷರ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ADVERTISEMENT

25 ವರ್ಷದ ಗುಲ್ವೀರ್ ಇತ್ತೀಚೆಗೆ 10,000 ಮೀ. ರೇಸ್ ಓಟವನ್ನು 27ನಿ.41.81 ಸೆ.ಗಳಲ್ಲಿ ಪೂರೈಸಿ 16 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದಿದ್ದರು. ಹಳೆಯ ದಾಖಲೆ ಹೊಂದಿದ್ದ ಸುರೇಂದ್ರ ಸಿಂಗ್‌  2008ರಲ್ಲಿ 28ನಿ.02.89 ಸೆ.ಗಳಲ್ಲಿ ಓಟ ಪೂರೈಸಿದ್ದರು.

ಆದರೆ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಅವರು ಸ್ವಲ್ಪದರಲ್ಲೇ ಕಳೆದುಕೊಂಡರು. ಅವರು ಇದಕ್ಕಾಗಿ ಓಟವನ್ನು 27.00.00 ಸೆ.ಗಳಲ್ಲಿ ಪೂರೈಸಬೇಕಾಗಿತ್ತು.

ಮಹಿಳಾ ತಂಡದಲ್ಲಿ ರಾಷ್ಟ್ರೀಯ ಚಾಂಪಿಯನ್ ಅಂಕಿತಾ, ಸೀಮಾ ಮತ್ತು ಅಂಜಲಿ ಕುಮಾರಿ ಅವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.