ADVERTISEMENT

ಭಾರತೀಯ ರೋಲರ್ ಹಾಕಿ ತಂಡಕ್ಕೆ ‘ಕೀರ್ತಿ’

ರಾಷ್ಟ್ರೀಯ ತಂಡಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಕ್ರೀಡಾಪಟು

ದೇವರಾಜ ನಾಯ್ಕ
Published 7 ಮೇ 2019, 19:45 IST
Last Updated 7 ಮೇ 2019, 19:45 IST
ಕೀರ್ತಿ ಹುಕ್ಕೇರಿ
ಕೀರ್ತಿ ಹುಕ್ಕೇರಿ   

ಕಾರವಾರ: ತಾಲ್ಲೂಕಿನ ಕೈಗಾದ ರೋಲರ್ ಸ್ಕೇಟಿಂಗ್‌ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿ ಕೀರ್ತಿ ಹುಕ್ಕೇರಿ,ರೋಲರ್‌ ಹಾಕಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾಳೆ.ಸ್ಪೇನ್‌ ದೇಶದ ಬಾರ್ಸಿಲೋನಾದಲ್ಲಿಜೂನ್4ರಿಂದ 14ರವರೆಗೆ ಚಾಂಪಿಯನ್‌ಶಿಪ್ ನಡೆಯಲಿದೆ.

ಕೈಗಾ ಅಣುವಿದ್ಯುತ್ ಕೇಂದ್ರೀಯ ವಿದ್ಯಾಲಯದಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.ಮೇ1ರಿಂದ 5ರವರೆಗೆ ಗುಜರಾತ್ ರಾಜ್ಯದ ನಂದುರ್‌ಬಾರ್‌ನಲ್ಲಿ ನಡೆದ ರಾಷ್ಟ್ರೀಯ ರೋಲರ್ ಹಾಕಿ ಆಯ್ಕೆ ಶಿಬಿರದಲ್ಲಿ ಪಾಲ್ಗೊಂಡಿದ್ದಳು. ಇವಳೊಂದಿಗೆಇದೇ ಕ್ಲಬ್‌ನಪ್ರತೀಕ್ಷಾ ಕುಲಕರ್ಣಿ ಹಾಗೂ ಎಸ್.ಡಿ.ಯುಕ್ತಿಶ್ರೀ ಕೂಡ ಭಾಗವಹಿಸಿದ್ದರು. ಅಂತಿಮವಾಗಿ ಕೀರ್ತಿ ಉತ್ತಮ ಪ್ರದರ್ಶನ ತೋರಿ, ಭಾರತೀಯ ರೋಲರ್‌ ಹಾಕಿಮಹಿಳಾ ತಂಡಕ್ಕೆ ಆಯ್ಕೆಯಾದಳು.

ರೋಲರ್ ಹಾಕಿಯಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಬಾಲಕಿ ಈಕೆಯಾಗಿದ್ದು, ಸ್ಪೇನ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾಳೆ.

ADVERTISEMENT

ಸತತ ತರಬೇತಿ

ಐದು ವರ್ಷಗಳಿಂದ ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಈಕೆ, ರಾಜ್ಯ ರೋಲರ್ ಹಾಕಿ ತಂಡದಲ್ಲೂ ಭಾಗವಹಿಸಿದ್ದಳು. ಈಕೆ ಇದ್ದ ಕರ್ನಾಟಕದ ತಂಡವು ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲಿ ಈ ಹಿಂದೆ ಎರಡು ಬಾರಿ ಕಂಚಿನ ಪದಕ ಗೆದ್ದುಕೊಂಡಿತ್ತು. ಕೈಗಾದ ರೋಲರ್ ಸ್ಕೇಟಿಂಗ್‌ ಕ್ಲಬ್‌ನ ತರಬೇತುದಾರ ದಿಲೀಪ್ ಹಣಬರ್ ಇವರಿಗೆ ಇಲ್ಲಿ ತರಬೇತಿ ನೀಡುತ್ತಿದ್ದರು.

‘ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಳೆದ ವರ್ಷ ನಡೆದ ರಾಷ್ಟ್ರಮಟ್ಟದ 56ನೇ ರೋಲರ್‌ ಹಾಕಿ ಚಾಂಪಿಯನ್‌ಶಿಪ್‌ ಆಯೋಜನೆಯಾಗಿತ್ತು. ಅದರಲ್ಲಿಬಾಲಕಿಯರ ಸಬ್‌ ಜ್ಯೂನಿಯರ್‌ ವಿಭಾಗದಲ್ಲಿ ಕರ್ನಾಟಕ ತಂಡವನ್ನು ನಮ್ಮ ಕ್ಲಬ್‌ನ ವಿದ್ಯಾರ್ಥಿಗಳು ಪ್ರತಿನಿಧಿಸಿದ್ದರು. ಅಲ್ಲಿ ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದೆವು. ಅದಕ್ಕೂ ಮುನ್ನ ಕೂಡ ಒಂದು ಬಾರಿ ಕಂಚಿನ ಪದಕ ಗೆದ್ದಿದ್ದೇವೆ. ಈ ಬಾರಿ ರಾಷ್ಟ್ರೀಯ ರೋಲರ್ ಹಾಕಿ ಶಿಬಿರಕ್ಕೆನಮ್ಮ ಕ್ಲಬ್‌ನಿಂದ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿರಾಷ್ಟ್ರೀಯ ತಂಡಕ್ಕೆ ಕೀರ್ತಿ ಆಯ್ಕೆಯಾಗಿರುವುದು ಖುಷಿ ತಂದಿದೆ’ ಎಂದು ದಿಲೀಪ್ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕೈಗಾದಲ್ಲಿ ಉತ್ತಮ ತರಬೇತಿ ಪಡೆದಿದ್ದೇನೆ. ಪ್ರತಿದಿನ ಎರಡರಿಂದ ಮೂರು ತಾಸು ಇಲ್ಲಿ ತರಬೇತಿ ಪಡೆಯುತ್ತಿದ್ದೆ. ಶಿಕ್ಷಣಕ್ಕೆ ಹಾಗೂ ಸ್ಕೇಟಿಂಗ್ ತರಬೇತಿಗೆ ಸರಿ ಸಮವಾಗಿ ಸಮಯ ನೀಡುತ್ತಿದ್ದೆ. ರಾಷ್ಟ್ರೀಯ ತಂಡದಲ್ಲಿ ಆಡಲು ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದು ಖುಷಿ ಕೊಟ್ಟಿತ್ತು. ಇದೀಗತಂಡಕ್ಕೆ ಆಯ್ಕೆಯಾಗಿದ್ದು,ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರವಾರದ ಹೆಸರನ್ನು ಬೆಳಗಲು ಪ್ರಯತ್ನಿಸುವೆ’ ಎನ್ನುತ್ತಾರೆಕೀರ್ತಿ ಹುಕ್ಕೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.