ADVERTISEMENT

ಹರಿಯಾಣ ಪಾರಮ್ಯ

ಖೇಲೊ ಇಂಡಿಯಾ ಯೂತ್‌ ಗೇಮ್ಸ್: ಸರಣ್‌ಗೆ ಚಿನ್ನ

ಪಿಟಿಐ
Published 13 ಜನವರಿ 2020, 20:00 IST
Last Updated 13 ಜನವರಿ 2020, 20:00 IST

ಗುವಾಹಟಿ : ಹರಿಯಾಣ ತಂಡವು ಖೇಲೊ ಇಂಡಿಯಾ ಯುವ ಕ್ರೀಡಾಕೂಟದ ನಾಲ್ಕನೇ ದಿನ ವಾದ ಸೋಮವಾರ 12 ಚಿನ್ನದ ಪದಕ ಗಳನ್ನು ಗೆದ್ದು ಮಹಾರಾಷ್ಟ್ರವನ್ನು ಹಿಂದಿಕ್ಕಿ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು.

ಕಬಡ್ಡಿಯಲ್ಲಿ ನಾಲ್ಕು, ಆರ್ಚರಿ ಹಾಗೂ ಅಥ್ಲೆಟಿಕ್ಸ್‌ನಲ್ಲಿ ತಲಾ ಮೂರು ಹಾಗೂ ಜಿಮ್ನಾಸ್ಟಿಕ್‌ ಹಾಗೂ ಸೈಕ್ಲಿಂಗ್‌ನಲ್ಲಿ ಒಂದೊಂದು ಪದಕ ಗಳು ಹರಿಯಾಣಕ್ಕೆ ಒಲಿದವು. ಒಟ್ಟು 17 ಚಿನ್ನದ ಪದಕಗಳನ್ನು ಬಾಚಿ ಕೊಂಡಿರುವ ಆ ತಂಡ ಆರನೇ ಸ್ಥಾನ ದಿಂದ ಮೊದಲ ಸ್ಥಾನಕ್ಕೆ ಜಿಗಿಯಿತು.

ಸೋಮವಾರ ಕೇವಲ ನಾಲ್ಕು ಚಿನ್ನ ಜಯಿಸಲು ಸಫಲವಾದ ಮಹಾರಾಷ್ಟ್ರ ಒಟ್ಟು 16 ಚಿನ್ನದ ಪದಕಗಳೊಂದಿಗೆ ಎರಡನೇ ಸ್ಥಾನಕ್ಕೆ ಜಾರಿತು.

ADVERTISEMENT

ಸರಣ್‌ ಚಿನ್ನದ ನಗು: ತಮಿಳುನಾಡಿನ ಸರಣ್‌ 21 ವರ್ಷದೊಳಗಿನವರ ಲಾಂಗ್‌ ಜಂಪ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ಮೊದಲ ಐದು ಪ್ರಯತ್ನಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಸರಣ್‌ ಆರನೇ ಪ್ರಯತ್ನದಲ್ಲಿ 7.41 ಮೀಟರ್‌ ಉದ್ದ ಜಿಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.