ಖೇಲೊ ಇಂಡಿಯಾ
(ಸಾಂದರ್ಭಿಕ ಚಿತ್ರ)
ನವದೆಹಲಿ: ಖೇಲೊ ಇಂಡಿಯಾ ಪ್ಯಾರಾ ಕ್ರೀಡೆಗಳ (ಕೆಐಪಿಜಿ) ಎರಡನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಬಂದಿರುವ 1300ಕ್ಕೂ ಅಧಿಕ ಕ್ರೀಡಾಪಟುಗಳನ್ನು ದೇಶದ ಖ್ಯಾತ ಪ್ಯಾರಾಲಿಂಪಿಯನ್ನರಾದ ಸುಮಿತ್ ಅಂಟಿಲ್ ಮತ್ತು ದೇವೇಂದ್ರ ಜಜಾರಿಯಾ ಅವರು ಬುಧವಾರ ಸ್ವಾಗತಿಸಿ ಶುಭ ಹಾರೈಸಿದರು. ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಇಂಥ ಕ್ರೀಡಾಕೂಟದ ಪ್ರಯೋಜನ ಪಡೆಯಬೇಕೆಂದು ಸಲಹೆ ನೀಡಿದರು.
ಈ ಕ್ರೀಡೆಗಳು ಗುರುವಾರ ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣ, ಇಂದಿರಾ ಗಾಂಧಿ ಕ್ರೀಡಾಂಗಣ ಮತ್ತು ಕರ್ನಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಆರಂಭವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.