ADVERTISEMENT

ಫುಟ್‌ಬಾಲ್‌: ಕೊಡಗು ಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 1:02 IST
Last Updated 16 ಸೆಪ್ಟೆಂಬರ್ 2025, 1:02 IST
ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡದ ಜೋಮನ್‌ ಜಾಕೋಬ್‌ (ಕೆಂಪು ಜೆರ್ಸಿ) ಹಾಗೂ ಎಚ್‌ಎಎಲ್‌ ಎಫ್‌ಸಿ ತಂಡದ ಮೊಹಮ್ಮದ್‌ ಆಲ್ಬಕ್ಸ್‌ (ಜೆರ್ಸಿ ಸಂಖ್ಯೆ 66) ಅವರು ಚೆಂಡಿನ ಮೇಲೆ ನಿಯಂತ್ರಣಕ್ಕಾಗಿ ಸೆಣಸಿದ್ದು ಹೀಗೆ –ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್‌
ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡದ ಜೋಮನ್‌ ಜಾಕೋಬ್‌ (ಕೆಂಪು ಜೆರ್ಸಿ) ಹಾಗೂ ಎಚ್‌ಎಎಲ್‌ ಎಫ್‌ಸಿ ತಂಡದ ಮೊಹಮ್ಮದ್‌ ಆಲ್ಬಕ್ಸ್‌ (ಜೆರ್ಸಿ ಸಂಖ್ಯೆ 66) ಅವರು ಚೆಂಡಿನ ಮೇಲೆ ನಿಯಂತ್ರಣಕ್ಕಾಗಿ ಸೆಣಸಿದ್ದು ಹೀಗೆ –ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್‌   

ಬೆಂಗಳೂರು: ಮೃಣಾಲ್‌ ಮುತುನ್ನಾ ಹಾಗೂ ಮೊಹಮ್ಮದ್‌ ಉನೈಸ್‌ ಅವರು ಗಳಿಸಿದ ಗೋಲಿನ ನೆರವಿನಿಂದ ಕೊಡಗು ಫುಟ್‌ಬಾಲ್‌ ಕ್ಲಬ್‌ ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–0 ಗೋಲುಗಳಿಂದ ಸೌತ್‌ ಯುನೈಟೆಡ್‌ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳಿಗೆ ಮೊದಲಾರ್ಧದಲ್ಲಿ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ದ್ವಿತೀಯಾರ್ಧದಲ್ಲಿ ಲಯ ಕಂಡುಕೊಂಡ ಕೊಡಗು ಎಫ್‌ಸಿ ತಂಡದ ಮೃಣಾಲ್‌ 69ನೇ ನಿಮಿಷದಲ್ಲಿ ಗೋಲು ಹೊಡೆದರೆ, ಮೊಹಮ್ಮದ್‌ (86ನೇ ನಿಮಿಷ) ಮುನ್ನಡೆಯನ್ನು 2–0ಗೆ ಹಿಗ್ಗಿಸಿದರು. ಸೌತ್‌ ಯುನೈಟೆಡ್‌ ತಂಡವು ಗೋಲು ಹೊಡೆಯುವಲ್ಲಿ ವಿಫಲವಾಯಿತು.

ಇನ್ನೊಂದು ಪಂದ್ಯದಲ್ಲಿ ರೂಟ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡವು 3–0ಯಿಂದ ಎಂಎಫ್‌ಎಆರ್‌ ಸ್ಟುಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವನ್ನು ನಿರಾಯಾಸವಾಗಿ ಸೋಲಿಸಿತು. ರೂಟ್ಸ್‌ ಫುಟ್‌ಬಾಲ್‌ ಕ್ಲಬ್‌ ತಂಡದ ಕೊಂತೌಜಂ ಅಮರ್‌ಜೀತ್‌ ಸಿಂಗ್‌ (16ನೇ ನಿ.), ಮೊಹಮ್ಮದ್‌ ನವಾಜ್‌ ಷರೀಫ್‌ (33ನೇ ನಿ.) ಹಾಗೂ ಮಾಷುಪ್‌ ಬಿನ್‌ ಯಾಕೂಬ್‌ (66ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.

ADVERTISEMENT

ದಿನದ ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು 2–0 ಗೋಲುಗಳಿಂದ ಎಚ್‌ಎಎಲ್‌ ಫುಟ್‌ಬಾಲ್‌ ಕ್ಲಬ್‌ ತಂಡದ ವಿರುದ್ಧ ಸುಲಭ ಜಯ ದಾಖಲಿಸಿತು. ಸ್ಪೋರ್ಟಿಂಗ್‌ ಕ್ಲಬ್‌ ತಂಡದ ಪರ ಇಶಾನ್‌ ರಘುನಂದನ್‌ (37ನೇ ನಿ.) ಹಾಗೂ ಆದರ್ಶ್‌ ನಾರಾಯಣಪುರಂ (54ನೇ ನಿ.) ತಲಾ ಒಂದು ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.