
ದೋಹಾ: ಭಾರತದ ಕೋನೇರು ಹಂಪಿ ಮತ್ತು ಚೀನಾದ ಝು ಜಿನೆರ್ ವಿಶ್ವ ರ್‍ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಎಂಟನೇ ಸುತ್ತಿನ ನಂತರ ತಲಾ ಆರೂವರೆ ಅಂಕಗಳೊಡನೆ ಅಗ್ರಸ್ಥಾನದಲ್ಲಿದ್ದಾರೆ. ಭಾನುವಾರ ಟೂರ್ನಿಗೆ ಕೊನೆಯ ದಿನವಾಗಿದ್ದು, ಇನ್ನೂ ಮೂರು ಸುತ್ತುಗಳು ಉಳಿದಿವೆ.
ಹಂಪಿ ಮೊದಲ ಬೋರ್ಡ್‌ನಲ್ಲಿ ರಷ್ಯಾದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರನ್ನು ಸೋಲಿಸಿದರೆ, ಝು ಝಿನೆರ್ ನಾಲ್ಕನೇ ಬೋರ್ಡ್‌ನಲ್ಲಿ ಭಾರತದ ದಿವ್ಯಾ ದೇಶಮುಖ್ (5.5) ಅವರನ್ನು ಸೋಲಿಸಿದರು. ದ್ರೋಣವಲ್ಲಿ ಹಾರಿಕಾ (6 ಅಂಕ) ಮತ್ತು ಚೀನಾದ ಚೆನ್ ಯಿನಿಂಗ್ (6 ಅಂಕ) ನಡುವಣ ಪಂದ್ಯ ಡ್ರಾ ಆಯಿತು.
ಓಪನ್ ವಿಭಾಗದ ಒಂಬತ್ತನೇ ಸುತ್ತಿನ ನಂತರ ರಷ್ಯಾದ ಗ್ರ್ಯಾಂಡ್‌ಮಾಸ್ಟರ್ ವ್ಲಾಡಿಸ್ಲಾವ್ ಆರ್ಟೆಮಿವ್ ಮತ್ತು ಹ್ಯಾನ್ಸ್ ನೀಮನ್ (ತಲಾ 7.5) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನಾರ್ವೆಯ ಮ್ಯಾಗ್ನಸ್ ಕಾರ್ಲಸನ್ (7) ಇತರ ಮೂವರೊಂದಿಗೆ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಡಿ.ಗುಕೇಶ್ (6.5) ಇತರ 12 ಮಂದಿಯೊಂದಿಗೆ ಜಂಟಿ ಏಳನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.