ಲಂಡನ್: ಬೆಂಗಳೂರಿನ ಕುಶ್ ಮೈನಿ ಅವರು ಅಲ್ಪೈನ್ ಫಾರ್ಮುಲಾ ಒನ್ ತಂಡದ ರಿಸರ್ವ್ ಡ್ರೈವರ್ ಆಗಿ ಬಡ್ತಿ ಪಡೆದಿದ್ದಾರೆ.
ಇದೇ 16ರಂದು ಮೆಲ್ಬರ್ನ್‌ನಲ್ಲಿ ಋತುವಿನ ಮೊದಲ ಹಂತ ಆರಂಭವಾಗಲಿದೆ. ಅದರಲ್ಲಿ ತಂಡವು ಭಾಗವಹಿಸಲಿದೆ.
ಮೈನಿ ಫಾರ್ಮುಲಾ 2ರ ಹಂತವನ್ನು ಪೂರ್ಣಗೊಳಿಸಿದರು. 24 ವರ್ಷದ ಮೈನಿ 2023ರ ಅಕ್ಟೋಬರ್‌ನಲ್ಲಿ ಅಲ್ಪೈನ್ ಜೂನಿಯರ್ ಡ್ರೈವರ್ ಕಾರ್ಯಕ್ರಮದಡಿಯಲ್ಲಿ ಸೇರಿಕೊಂಡರು. ಇದೀಗ ಅವರು ಫ್ರಾಂಕೊ ಕೊಲಾಪಿಂಟೊ, ಪಾಲ್ ಆ್ಯರನ್ ಮತ್ತು ರಿಯೊ ಹಿರಾಕಾವಾ ಅವರೂ ಈ ರಿಸರ್ವ್ ಡ್ರೈವರ್ಸ್ ಬಳಗದಲ್ಲಿದ್ದಾರೆ.
ಫಾರ್ಮುಲಾ ಒನ್ ಬಳಗಕ್ಕೆ ಸೇರಿದ ಭಾರತದ ಮೂರನೇ ಡ್ರೈವರ್ ಎಂಬ ಹೆಗ್ಗಳಿಕೆಗೆ ಮೈನಿ ಪಾತ್ರರಾಗಿದ್ದಾರೆ. ಈ ಮೊದಲು ನಾರಾಯಣ್ ಕಾರ್ತಿಕೆಯನ್ ಮತ್ತು ಕರುಣ್ ಚಾಂದೋಕ್ ಅವರು ಈ ಸಾಧನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.