ADVERTISEMENT

ಬ್ಯಾಡ್ಮಿಂಟನ್‌: ಮತ್ತೊಂದು ಪ್ರಶಸ್ತಿ ಗೆದ್ದ ಲಕ್ಷ್ಯ

ಸಾರ್‌ಲೋರ್‌ಲಕ್ಸ್‌ ಓಪನ್‌: ಫೈನಲ್‌ನಲ್ಲಿ ಚೀನಾ ಆಟಗಾರನ ವಿರುದ್ಧ ಜಯ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 20:04 IST
Last Updated 3 ನವೆಂಬರ್ 2019, 20:04 IST

ಸಾರ್‌ಬ್ರೂಕೆನ್‌, ಜರ್ಮನಿ: ಮೊದಲ ಗೇಮ್‌ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ಲಕ್ಷ್ಯ ಸೇನ್‌, ಚೀನಾದ ವೆಂಗ್‌ ಹಾಂಗ್‌ ಯಾಂಗ್ ಅವರನ್ನು ಸೋಲಿಸಿಸಾರ್‌ಲೋರ್‌ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಇದು ಭಾರತದ ಆಟಗಾರನಿಗೆ ಸತತ ಎರಡನೇ ಬಿಡಬ್ಲ್ಯುಎಫ್‌ ಟೂರ್ನಿಯ ಪ್ರಶಸ್ತಿ ಎನಿಸಿತು.

ಭಾನುವಾರ 59 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ಲಕ್ಷ್ಯ 17–21, 21–18, 21–16 ರಲ್ಲಿ ಜಯಗಳಿಸಿದರು. ಈ ವರ್ಷ ಇದು ಭಾರತದ ಆಟಗಾರನಿಗೆ ಮೂರನೇ ಪ್ರಶಸ್ತಿ. ಬೆಲ್ಜಿಯನ್‌ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಮತ್ತು ಡಚ್‌ ಓಪನ್‌ ಟೂರ್ನಿಯಲ್ಲೂ ಅವರು ಚಾಂಪಿಯನ್‌ ಆಗಿದ್ದರು. ಪೋಲಿಷ್‌ ಓಪನ್‌ನಲ್ಲಿ ಫೈನಲ್‌ ತಲುಪಿದ್ದರು. 18 ವರ್ಷ ವಯಸ್ಸಿನ ಉತ್ತರಾಖಂಡದ ಈ ಆಟಗಾರ ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ 51ನೇ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ ಏಷ್ಯನ್‌ ಜೂನಿಯರ್‌ ಚಾಂಪಿಯನ್‌ ಆಗಿದ್ದ ಅವರು ಯೂತ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ, ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಈಗ ಸೀನಿಯರ್‌ ಸರ್ಕ್ಯೂಟ್‌ನಲ್ಲೂ ಗಮನ ಸೆಳೆಯುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.