ಲಕ್ಷ್ಯ ಸೇನ್
ಜಕಾರ್ತ: ಭಾರತದ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಓಪನ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ, ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಸಾ ಜೊಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ನಿರಾಸೆ ಅನುಭವಿಸಿತು.
ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಸೇನ್ ಅವರು ಗುರುವಾರ 16 ಘಟ್ಟದ ಪಂದ್ಯದಲ್ಲಿ 21-9, 21-15ರಿಂದ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಹಿಮ್ಮೆಟ್ಟಿಸಿದರು. ಮುಂದಿನ ಸುತ್ತಿನಲ್ಲಿ ಸೇನ್ ಅವರು ಡೆನ್ಮಾರ್ಕ್‌ನ ಆಂಡರ್ಸ್ ಆಂಟೊನ್ಸೆನ್ ಅವರನ್ನು ಎದುರಿಸಲಿದ್ದಾರೆ.
ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಟ್ರಿಸಾ– ಗಾಯತ್ರಿ ಜೋಡಿಯು 21-19, 19-21, 19-21ರಿಂದ ಜಪಾನ್‌ನ ಮೇಯು ಮಾತ್ಸುಮೊಟೊ ಮತ್ತು ವಕಾನಾ ನಾಗಹರಾ ಅವರಿಗೆ ಮಣಿಯಿತು.
ತನಿಷಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿಯೂ 16ರ ಘಟ್ಟದ ಪಂದ್ಯದಲ್ಲಿ ಮುಗ್ಗರಿಸಿತು. ಭಾರತದ ಆಟಗಾರ್ತಿಯರು 13-21, 21-19, 13-21ರಿಂದ ದಕ್ಷಿಣ ಕೊರಿಯಾದ ಹಾ ನಾ ಬೇಕ್ ಮತ್ತು ಸೋ-ಹೀ ಲೀ ಅವರಿಗೆ ಮಣಿದರು. ಈ ಮೂಲಕ ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಮಿಶ್ರ ಡಬಲ್ಸ್‌ನಲ್ಲಿ ಭಾರತದ ಬಿ.ಸುಮೀತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ದಂಪತಿ ಜೋಡಿ 21–9, 21–11ರಿಂದ ಚೀನಾದ ಸಿವೆ ಝೆಂಗ್ ಮತ್ತು ಯಾಕಿಯಾಂಗ್ ಹುವಾಂಗ್ ವಿರುದ್ಧ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.