ADVERTISEMENT

ಕೃಷಿಯ ಖುಷಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:04 IST
Last Updated 6 ಸೆಪ್ಟೆಂಬರ್ 2020, 16:04 IST
ಬಿ.ಸಿ.ರಮೇಶ್
ಬಿ.ಸಿ.ರಮೇಶ್   

ಕೊರೊನಾದಿಂದಾಗಿ ಎಲ್ಲೂ ಹೋಗಲು ಸಾಧ್ಯವಿಲ್ಲದ, ಕ್ರೀಡಾ ಚಟುವಟಿಕೆ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಗೆಳೆಯ ಹಾಗೂ ಕಬಡ್ಡಿ ಆಟಗಾರ ರಾಜಶೇಖರನ ತೋಟದಲ್ಲಿ ಕಾಲ ಕಳೆದೆ. ಅಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಖುಷಿ ಕಂಡೆ. ಸಣ್ಣವನಿದ್ದಾಗ ಕೃಷಿ ಮಾಡುವುದನ್ನು ನೋಡಿದ್ದೆ, ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದೆ ಕೂಡ. ಆದರೆ ನಿಜವಾಗಿ ಕೃಷಿ ಕಾರ್ಯದಲ್ಲಿ ತೊಡಗಲು ಸಮಯ ಸಿಕ್ಕಿದ್ದು ಲಾಕ್‌ಡೌನ್ ಸಂದರ್ಭದಲ್ಲಿ. ರಾಜಶೇಖರನ ತೋಟದಲ್ಲಿ ಪಾತಿ ಮಾಡಲು ಕಲಿತಿದ್ದನ್ನು ಮರೆಯಲಾರೆ.

ಬೆಂಗಳೂರು ಹೊರವಲಯದ ದೊಡ್ಡಾಲದಮರ ಸಮೀಪ ಮೂರು ಎಕರೆ ವಿಸ್ತಾರದ ತೋಟಕ್ಕೆ ಸುಮಾರು ಎರಡು ತಿಂಗಳು ಹೋಗಿದ್ದೆ. ಶಾರ್ಟ್ಸ್‌ ಮತ್ತು ಟಿ–ಶರ್ಟ್‌ ತೊಟ್ಟುಕೊಂಡು ಗೆಳೆಯನ ಜೊತೆಗೂಡಿ ತೆಂಗಿನಮರಗಳಿಗೆ ಪಾತಿ ಕಟ್ಟಿ, ಗೊಬ್ಬರ ಹಾಕಿ, ನೀರು ಹೋಗಲು ವ್ಯವಸ್ಥೆ ಮಾಡಿ ಸಂಭ್ರಮಿಸಿದೆ. ತೋಟದಲ್ಲೇ ಅಡುಗೆ ಮಾಡುತ್ತಿದ್ದೆವು. ಇದಕ್ಕಾಗಿ ಮಣ್ಣಿನ ಒಲೆ ತಯಾರಿಸಿದ್ದು ಕೂಡ ಹೊಸ ಅನುಭವ. ಇಟ್ಟಿಗೆ ಇರಿಸಿ, ಅದಕ್ಕೆ ಮಣ್ಣು ಮೆತ್ತಿ ಒಲೆ ಮಾಡಿ ಕಟ್ಟಿಗೆಯನ್ನು ಉರಿಸಿ ಬಗೆಬಗೆಯ ಅಡುಗೆ ತಯಾರಿಸುತ್ತಿದ್ದೆವು.

ಬಿ.ಸಿ.ರಮೇಶ್, ಅಂತರರಾಷ್ಟ್ರೀಯ ಮಾಜಿ ಕಬಡ್ಡಿ ಪಟು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.