ADVERTISEMENT

ಪ್ಯಾರಾ ಈಜು ಸ್ಪರ್ಧೆಗೆ ತಡೆ

ಏಜೆನ್ಸೀಸ್
Published 27 ಜನವರಿ 2019, 20:15 IST
Last Updated 27 ಜನವರಿ 2019, 20:15 IST

ಪ್ಯಾರಿಸ್‌: ಇಸ್ರೇಲ್‌ ಅಥ್ಲೆಟ್‌ಗಳು ಪಾಲ್ಗೊಳ್ಳುವ ಸಾಧ್ಯತೆಗಳು ಇಲ್ಲದ ಕಾರಣ, 2019ರಲ್ಲಿ ಮಲೇಷ್ಯಾದಲ್ಲಿ ನಡೆಯಬೇಕಿದ್ದ ವಿಶ್ವ ಪ್ಯಾರಾ ಈಜು ಚಾಂಪಿಯನ್‌ಷಿಪ್‌ ಅನ್ನು ತಡೆಹಿಡಿಯಲಾಗಿದೆ.

ಈ ವಿಷಯವನ್ನು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿ (ಐಪಿಸಿ) ಭಾನುವಾರ ಖಚಿತಪಡಿಸಿದೆ.

‘ಇಸ್ರೇಲ್‌ನ ಈಜುಪಟುಗಳು ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಮಲೇಷ್ಯಾ ಗೃಹ ಸಚಿವಾಲಯ ಖಾತ್ರಿಪಡಿಸಲಿಲ್ಲ. ಅವರು ತಾರತಮ್ಯ ಮುಕ್ತವಾಗಿ ಇರುವ ಸಾಧ್ಯತೆಯ ಬಗ್ಗೆಯೂ ಸಚಿವಾಲಯ ಸಮರ್ಪಕ ಮಾಹಿತಿ ನೀಡಲಿಲ್ಲ. ಭದ್ರತೆಯ ಬಗ್ಗೆಯೂ ಸಂದೇಹ ಇದೆ’ ಎಂದು ಐಪಿಸಿಯು ತಿಳಿಸಿದೆ.

ADVERTISEMENT

ಐಪಿಸಿ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಇಸ್ರೇಲ್‌ ವಿದೇಶಾಂಗ ಸಚಿವ ಇಮ್ಯಾನುಯೆಲ್ ನಹ್ಸಾನ್‌ ‘ಇದು, ಮೌಲ್ಯಗಳಿಗೆ ಲಭಿಸಿದ ಜಯವಾಗಿದೆ. ಈ ಮೂಲಕ ಸ್ವಾತಂತ್ರ್ಯ ಮತ್ತು ಸಮಾನತೆಗೆ ಬೆಲೆ ಸಿಕ್ಕಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.