ADVERTISEMENT

ಮಾನಸಿ ಜೋಶಿಗೆ ಅಭಿನಂದನೆಯ ಮಹಾಪೂರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 16:57 IST
Last Updated 29 ಆಗಸ್ಟ್ 2019, 16:57 IST
ಚಿನ್ನ ಗೆದ್ದ ಮಾನಸಿ ಜೋಶಿ ಅವರನ್ನು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಆಟಗಾರ್ತಿಯರು ಅಭಿನಂದಿಸಿದ ಪರಿ –ಪಿಟಿಐ ಚಿತ್ರ
ಚಿನ್ನ ಗೆದ್ದ ಮಾನಸಿ ಜೋಶಿ ಅವರನ್ನು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಆಟಗಾರ್ತಿಯರು ಅಭಿನಂದಿಸಿದ ಪರಿ –ಪಿಟಿಐ ಚಿತ್ರ   

ಬೆಂಗಳೂರು: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮಾನಸಿ ಜೋಶಿ, 2 ಚಿನ್ನ ಗೆದ್ದ ಪ್ರಮೋದ್ ಭಗತ್‌ ಮತ್ತು ಇತರ ಬ್ಯಾಡ್ಮಿಂಟನ್ ಪಟುಗಳ ಬಗ್ಗೆ ಕ್ರೀಡಾ ಪ್ರೇಮಿಗಳು ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

30 ವರ್ಷದ ಮಾನಸಿ, ಮಹಿಳೆಯರ ಎಸ್‌ಎಲ್‌–3 ವಿಭಾಗದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಪಾರುಲ್ ಪರ್ಮಾರ್ ಅವರನ್ನು 21–12, 21–7ರಲ್ಲಿ ಮಣಿಸಿ ಚೊಚ್ಚಲ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಐಪಿಎಸ್‌ ಅಧಿಕಾರಿ ಕಿರಣ್‌ ಬೇಡಿ ಒಳಗೊಂಡಂತೆ ಹಲವು ಗಣ್ಯರು ಮತ್ತು ಇತರರು ಸಾಮಾಜಿಕ ತಾಣಗಳಲ್ಲಿ ಮಾನಸಿ ಅವರನ್ನು ಹೊಗಳಿದ್ದಾರೆ.

ADVERTISEMENT

ಪ್ರಮೋದ್ ಭಗತ್‌ 2 ಚಿನ್ನ, ಮನೋಜ್ ಸರ್ಕಾರ್‌ 1 ಚಿನ್ನ, ತರುಣ್ 2 ಬೆಳ್ಳಿ, ನಿತೇಶ್ ಕುಮಾರ್‌, ನಾಗರ್ ಕೃಷ್ಣ ಮತ್ತು ರಾಜ ಮಗೋತ್ರ, ಪಾರುಲ್ ಪರ್ಮಾರ್‌ ತಲಾ 1 ಬೆಳ್ಳಿ, ಮನೋಜ್ ಸರ್ಕಾರ್‌, ಸುಖಾಂತ್ ಕದಂ, ನಾಗರ್ ಕೃಷ್ಣ, ಉಮೇಶ್ ಕುಮಾರ್‌, ರಾಜ್ ಕುಮಾರ್‌ ಹಾಗೂ ರಾಕೇಶ್ ಪಾಂಡೆ ತಲಾ ಒಂದು ಕಂಚಿನ ಪದಕ ಗಳಿಸಿದ್ದರು. ಇವರೆಲ್ಲರಿಗೆ ಕ್ರೀಡಾ ಸಚಿವ ಕಿರಣ್ ರಿಜುಜು ಒಟ್ಟು ₹ 1.82 ಕೋಟಿ ಮೊತ್ತವನ್ನು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.