ADVERTISEMENT

ಕನ್ನಡಿಗ ವೆಂಕಟಾಚಲಪ್ಪಗೆ ಮೂರು ಪದಕ

ಇಂಡೊನೇಷ್ಯಾ ಓಪನ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 16:05 IST
Last Updated 5 ನವೆಂಬರ್ 2018, 16:05 IST
ಪದಕಗಳೊಂದಿಗೆ ಸಂಭ್ರಮಿಸಿದ ವೆಂಕಟಾಚಲಪ್ಪ– ‍ಪ್ರಜಾವಾಣಿ ಚಿತ್ರ
ಪದಕಗಳೊಂದಿಗೆ ಸಂಭ್ರಮಿಸಿದ ವೆಂಕಟಾಚಲಪ್ಪ– ‍ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕದ ಎಸ್‌.ಟಿ.ವೆಂಕಟಾಚಲಪ್ಪ ಅವರು ಜಕಾರ್ತದಲ್ಲಿ ನಡೆದ ಇಂಡೊನೇಷ್ಯಾ ಓಪನ್‌ ಮಾಸ್ಟರ್ಸ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕಗಳನ್ನು ಗೆದ್ದಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ವೆಂಕಟಾಚಲಪ್ಪ ಅವರು 70 ರಿಂದ 74 ವರ್ಷದೊಳಗಿನವರ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ರಾವಮಂಗುನ್‌ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ನಡೆದ 3000 ಮೀಟರ್ಸ್‌ ನಡಿಗೆ ಸ್ಪರ್ಧೆಯಲ್ಲಿ 73 ವರ್ಷ ವಯಸ್ಸಿನ ವೆಂಕಟಾಚಲಪ್ಪ ಚಿನ್ನದ ಪದಕ ಜಯಿಸಿದರು. ಅವರು 18 ನಿಮಿಷ 43 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.

ADVERTISEMENT

1500 ಮೀಟರ್ಸ್‌ ಓಟದ ಸ್ಪರ್ಧೆಯಲ್ಲೂ ಅವರು ಮೋಡಿ ಮಾಡಿದರು. 7 ನಿಮಿಷ 10 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮೆಟ್ಟಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

3000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಅವರಿಂದ ಬೆಳ್ಳಿಯ ಸಾಧನೆ ಮೂಡಿಬಂತು. ಆರಂಭದಿಂದಲೇ ಚುರುಕಾಗಿ ಓಡಿದ ರಾಜ್ಯದ ಅಥ್ಲೀಟ್‌ 15 ನಿಮಿಷ 13 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.