ADVERTISEMENT

ಹಾಕಿ: ಕೆನರಾ ಬ್ಯಾಂಕ್‌, ಹರಿಯಾಣಗೆ ಜಯ

ಪಿಟಿಐ
Published 4 ಫೆಬ್ರುವರಿ 2019, 17:07 IST
Last Updated 4 ಫೆಬ್ರುವರಿ 2019, 17:07 IST

ಗ್ವಾಲಿಯರ್‌: ಕೆನರಾ ಬ್ಯಾಂಕ್ ಮತ್ತು ಹಾಕಿ ಹರಿಯಾಣ ತಂಡಗಳು ಇಲ್ಲಿ ನಡೆಯುತ್ತಿರುವ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ‘ಎ’ ಡಿವಿಷನ್‌ನಲ್ಲಿ ಸೋಮವಾರ ಅಮೋಘ ಜಯ ಸಾಧಿಸಿದವು.

ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲರ್ ಮತ್ತು ಉತ್ತರ ಪ್ರದೇಶ ಹಾಕಿ ಸಂಸ್ಥೆ ಕೂಡ ಮಹತ್ವದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ ಹಂತಕ್ಕೇರುವ ಕನಸನ್ನು ಜೀವಂತವಾಗಿ ಇರಿಸಿಕೊಂಡವು.

‘ಎ’ ಗುಂಪಿನ ಪಂದ್ಯದಲ್ಲಿ ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲರ್ ತಂಡ ಇಂಡಿಯನ್ ಯೂನಿವರ್ಸಿಟೀಸ್‌ ಎದುರು 5–1ರಿಂದ ಗೆದ್ದಿತು. ‘ಬಿ’ ಗುಂಪಿನ ಹಣಾಹಣಿಯಲ್ಲಿ ಹರಿಯಾಣ, 2–1ರಿಂದ ಕೇಂದ್ರ ಮೀಸಲು ಪೊಲೀಸ್ ಪಡೆಯನ್ನು ಸೋಲಿಸಿತು.

ADVERTISEMENT

’ಸಿ’ ಗು‍ಂಪಿನ ರೋಚಕ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಎದುರು 1–0ಯಿಂದ ಗೆದ್ದಿತು. ‘ಡಿ’ ಗುಂಪಿನಲ್ಲಿ ಕೆನರಾ ಬ್ಯಾಂಕ್‌ 3–1ರಿಂದ ನಾಮಧಾರಿ ಇಲೆವನ್ ಎದುರು ಗೆಲುವು ಸಾಧಿಸಿತು.

ರೌಂಡ್ ರಾಬಿನ್ ಹಂತದ ಪಂದ್ಯಗಳು ಮಂಗಳವಾರ ಕೊನೆಗೊಳ್ಳಲಿದ್ದು ‘ಎ’ ಗುಂಪಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಮತ್ತು ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲರ್ ತಂಡ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿವೆ.

‘ಬಿ’ ಗುಂಪಿನಲ್ಲಿ ಪೆಟ್ರೋಲಿಯಂ ಸ್ಪೋರ್ಟ್ಸ್‌ ಕಂಟ್ರೋಲ್ ಬೋರ್ಡ್ ಮತ್ತು ಹರಿಯಾಣ ಮೊದಲೆರಡು ಸ್ಥಾನಗಳಲ್ಲಿದ್ದು ‘ಸಿ’ ಗುಂಪಿನಲ್ಲಿ ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಸ್ ಮತ್ತು ಉತ್ತರ ಪ್ರದೇಶ ಹಾಕಿ ತಂಡ ಅಗ್ರ ಎರಡು ಸ್ಥಾನಗಳನ್ನು ಗಳಿಸಿವೆ. ‘ಡಿ’ ಗುಂಪಿನಲ್ಲಿ ಏರ್ ಇಂಡಿಯಾ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ಮತ್ತು ಕರ್ನಾಟಕ ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.