ADVERTISEMENT

ಮಿಥುನ್‌ ಚಾಂಪಿಯನ್‌

ಪಿಟಿಐ
Published 15 ಡಿಸೆಂಬರ್ 2019, 19:40 IST
Last Updated 15 ಡಿಸೆಂಬರ್ 2019, 19:40 IST
ಪ್ರಶಸ್ತಿಯೊಂದಿಗೆ ಪೆರೆರಾ
ಪ್ರಶಸ್ತಿಯೊಂದಿಗೆ ಪೆರೆರಾ   

ಕೋಲ್ಕತ್ತ: ಶ್ರೀಲಂಕಾದ ಮಿಥುನ್ ಪೆರೆರಾ ಅವರು ರಾಯಲ್‌ ಕಲ್ಕತ್ತಾ ಗಾಲ್ಫ್‌ ಕ್ಲಬ್‌ (ಆರ್‌ಸಿಜಿಸಿ) ಓಪನ್‌ ಗಾಲ್ಪ್‌ ಚಾಂಪಿಯನ್‌ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಇದುವರೆಗೆ ಏಳು ಟ್ರೋಫಿ ಗೆದ್ದಿರುವ ಮಿಥುನ್‌ಭಾನುವಾರ, ಪ್ರಶಸ್ತಿ ಗೆಲ್ಲುವ ಮೂಲಕ ₹6,46000 ಬಹುಮಾನ ಮೊತ್ತವನ್ನು ತಮ್ಮದಾಗಿಸಿಕೊಂಡರು. ಒಟ್ಟು ₹40 ಲಕ್ಷ ಬಹುಮಾನ ಮೊತ್ತದ ಟೂರ್ನಿ ಇದಾಗಿತ್ತು.

ಲಖನೌನ ಸಂಜೀವ್‌ಕುಮಾರ್‌ 2ನೇ ಸ್ಥಾನ ಗಳಿಸಿದರು. ಮುಂಬೈನ ಅನಿಲ್‌ ಬಜರಂಗ್‌ ಮಾನೆ ಹಾಗೂ ದೆಹಲಿಯ ಶಮಿಮ್‌ ಖಾನ್‌ ಜಂಟಿ ಮೂರನೇ ಸ್ಥಾನ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.