ಪ್ರಶಸ್ತಿಯೊಂದಿಗೆ ಮೌಂಟ್ಸ್ ಕ್ಲಬ್ ಬಾಲಕಿಯರ ತಂಡ. (ನಿಂತವರು) ಎಡದಿಂದ; ಅನನ್ಯಾ ಜೆ, ಝರಾ ಡಿ, ನಿಧಿ ಉಮೇಶ್, ಜಯಂತಿ (ಕೋಚ್) ಕೆ. ಗೋವಿಂದರಾಜ್ (ಫಿಬಾ ಏಷ್ಯಾ ಅಧ್ಯಕ್ಷ), ನಿಲಾಯ ರೆಡ್ಡಿ (ನಾಯಕಿ), ಅಂತರಾ ಕೆ.ಜಿ ಮತ್ತು ಜಾಹ್ನವಿ ಡಿ. (ಮಂಡಿಯೂರಿದವರು) ಅನುಷ್ಕಾ, ಅನನ್ಯಾ ಗೌತಮ್, ನಕ್ಷತ್ರಾ ಕೆ. ಮತ್ತು ತಸ್ಮಿ ಶೆಟ್ಟಿ ಡಿ.
ಪ್ರಜಾವಾಣಿ ಚಿತ್ರ:ಎಸ್.ಕೆ. ದಿನೇಶ್
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಮತ್ತು ಮೌಂಟ್ಸ್ ಕ್ಲಬ್ ತಂಡಗಳು ಡಿ.ಎನ್.ರಾಜಣ್ಣ ಸ್ಮರಣಾರ್ಥ ಟ್ರೋಫಿಗಾಗಿ ನಡೆದ ರಾಜ್ಯ ಜೂನಿಯರ್ (18 ವರ್ಷದೊಳಗಿನವರ) ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಪ್ರಶಸ್ತಿಯನ್ನು ಗೆದ್ದುಕೊಂಡವು.
ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬಾಲಕರ ಫೈನಲ್ ಹಣಾಹಣಿಯಲ್ಲಿ ಚಿಕ್ಕಮಗಳೂರು ತಂಡವು 91–78ರಿಂದ ಡಿವೈಇಎಸ್ ಬೆಂಗಳೂರು ತಂಡವನ್ನು ಮಣಿಸಿತು. ಚಿಕ್ಕಮಗಳೂರು ಪರ ನಿಶಾಂತ್ 30, ನೆಟ್ಲ ಚಾಣಕ್ಯ 20, ರೆಹಾನ್ ಖಾನ್ 18 ಅಂಕ ಗಳಿಸಿದರು. ಡಿವೈಇಎಸ್ ಪರ ಬಾತೇಶ್ 29, ಲಿಖಿತ್ 12 ಅಂಕ ಕಲೆಹಾಕಿದರು.
ಬಾಲಕಿಯರ ಫೈನಲ್‌ನಲ್ಲಿ ಮೌಂಟ್ಸ್ ತಂಡವು 54–47ರಿಂದ ಮೈಸೂರು ಜಿಲ್ಲೆ ‘ಎ’ ತಂಡವನ್ನು ಮಣಿಸಿತು. ನಿಲಾಯ ರೆಡ್ಡಿ 20, ನಕ್ಷತ್ರ 16 ಅಂಕಗಳನ್ನು ಮೌಂಟ್ಸ್ ತಂಡಕ್ಕೆ ತಂದಿತ್ತರು. ಮೈಸೂರು ಪರ ಕುಸುಮಾ (21) ಮಿಂಚಿದರು.
ಬಾಲಕರ ವಿಭಾಗದಲ್ಲಿ ಹೂಪ್ಸ್ 7 ಬಿ.ಸಿ ಮತ್ತು ಎಚ್‌ಬಿಆರ್ ಬಿ.ಸಿ ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದವು. ಬಾಲಕಿಯರ ವಿಭಾಗದಲ್ಲಿ ಮಂಡ್ಯ ಜಿಲ್ಲೆ ಮೂರನೇ ಮತ್ತು ಬೆಂಗಳೂರು ವ್ಯಾನ್ಗಾಡ್ಸ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಪ್ರಶಸ್ತಿ ಗೆದ್ದ ತಂಡಕ್ಕೆ ₹30 ಸಾವಿರ, ರನ್ನರ್ಸ್ ಅಪ್ ತಂಡಕ್ಕೆ ₹20 ಸಾವಿರ ಮತ್ತು ಮೂರನೇ ಸ್ಥಾನ ಪಡೆದ ತಂಡಕ್ಕೆ ₹ 10 ಸಾವಿರ ಬಹುಮಾನ ನೀಡಲಾಯಿತು. ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್, ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಉಪಾಧ್ಯಕ್ಷರಾದ ರಾಜನ್, ಗುಣಶೇಖರ ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.