
ಚೆನ್ನೈ: ಬೆಂಗಳೂರಿನ ಹೇಮಂತ್ ಮುದ್ದಪ್ಪ ಅವರು, ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಮೋಟರ್‌ಸೈಕಲ್ ಡ್ರಾಗ್ ರೇಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಎರಡು ಗೆಲುವು ಮತ್ತೊಂದು ಪೋಡಿಯಂ ಫಿನಿಷ್ ಸಾಧಿಸಿದರು. ಈ ರೇಸ್‌ನಲ್ಲಿ ತಮ್ಮ ಹಿಡಿತ ಮುಂದುವರಿಸಿದರು.
‘ಮಂತ್ರ ರೇಸಿಂಗ್’ ಪರ ರೈಡಿಂಗ್ ಮಾಡಿದ ಮುದ್ದಪ್ಪ ಅನ್‌ರಿಸ್ಟ್ರಿಕ್ಟೆಡ್ ಸೂಪರ್ ಸ್ಪೋರ್ಟ್ 4–ಸ್ಟ್ರೋಕ್ ಕ್ಲಾಸ್ ಸ್ಪರ್ಧೆಯಲ್ಲಿ 8.269 ಸೆ.ಗಳಲ್ಲಿ ‘ಕ್ವಾರ್ಟರ್ ಮೈಲು’ ದೂರ ಕ್ರಮಿಸಿದರು. ಅವರು ಫಾಸ್ಟ್ ಟ್ರ್ಯಾಕ್ ರೇಸಿಂಗ್ ಇಂಡಿಯಾದ ಹನುಮಾನ್ ಪಾವ್ಶೆ (8.301 ಸೆ.) ಅವರಿಂದ ತೀವ್ರ ಪೈಪೋಟಿ ಎದುರಿಸಿದರು.
ಮುದ್ದಪ್ಪ ಮತ್ತು ಪಾವ್ಶೆ ಅವರು ಈಗ ತಲಾ 55 ಚಾಂಪಿಯನ್‌ಷಿಪ್ ಪಾಯಿಂಟ್ಸ್ ಹೋದಿದ್ದಾರೆ. ಅಲಿಮೊನ್ ಸಾಯಿ ದಲ್ವಿ 53 ಪಾಯಿಟ್ಸ್ ಗಳಿಸಿದ್ದಾರೆ.
ಮುದಪ್ಪ ಅವರು 1051–1650ಸಿಸಿ ಕೆಟಗರಿಯಲ್ಲೂ ಜಯಶಾಲಿಯಾದರು. 8.541 ಸೆ.ಗಳಲ್ಲಿ ನಿಗದಿ ಅಂತರ ಕ್ರಮಿಸಿದರು. ಮುಜಾಹಿದ್ ಪಾಷಾ (8.629 ಸೆ) ಮತ್ತು ಅಲಿಮೊನ್ ಸಾಯಿ ದಲ್ವಿ (8.694 ಸೆ.) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದರು.
ಮುದ್ದಪ್ಪ ಈಗ ಒಟ್ಟು75 ಪಾಯಿಂಟ್ಸ್ ಹೊಂದಿದ್ದು ಟ್ರೋಫಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಪಾಶಾ (54) ಮತ್ತು ದಲ್ವಿ (38) ಬಹಳ ಹಿಂದೆಯಿದ್ದಾರೆ.
851–1050 ಸಿಸಿ ವಿಭಾಗದಲ್ಲಿ ಮಂಬೈನ ಪಾವ್ಶೆ (8.338 ಸೆ.) ಅಲ್ಪಅಂತರದಲ್ಲಿ ಮುದ್ದಪ್ಪ ಅವರನ್ನು ಹಿಂದೆಹಾಕಿದರು. ಆದರೆ 15 ಬಾರಿಯ ಡ್ರ್ಯಾಗ್ ರೇಸ್ ಚಾಂಪಿಯನ್ ಆಗಿರುವ ಮುದ್ದಪ್ಪ ಒಟ್ಟಾರೆ 68 ಪಾಯಿಂಟ್ಸ್ ಗಳಿಸಿದ್ದು ಮುಂದಿದ್ದಾರೆ. ಪಾವ್ಶೆ 53 ಪಾಯಿಂಟ್ಸ್ ಹೊಂದಿದ್ದಾರೆ.
ಸೂಪರ್ ಸ್ಪೋರ್ಟ್ಸ್ 2–ಸ್ಟ್ರೋಕ್ (131–165 ಸಿಸಿ) ವಿಭಾಗದ ಕಿರೀಟ ಬೆಂಗಳೂರಿನ ಪ್ರಶಾಂತ್ ಎಸ್. ಪಾಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.