ADVERTISEMENT

ಒಲಿಂಪಿಕ್ಸ್ ತಂಡದಲ್ಲಿ ಸ್ಥಾನ ಗಳಿಸುವತ್ತ ಚಿತ್ತ: ರೀನಾ

ಪಿಟಿಐ
Published 29 ಮೇ 2021, 13:59 IST
Last Updated 29 ಮೇ 2021, 13:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್‌ಗೆ ತೆರಳುವ ತಂಡದಲ್ಲಿ ಸ್ಥಾನ ಗಳಿಸಲು ದೇಹವನ್ನು ಫಿಟ್ ಆಗಿರಿಸಿಕೊಳ್ಳುವುದು ನನ್ನ ಪ್ರಮುಖ ಗುರಿಯಾಗಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ಡಿಫೆಂಡರ್‌ ರೀನಾ ಖೋಕರ್‌ ಹೇಳಿದ್ದಾರೆ.

ಟೋಕಿಯೊ ಕೂಟಕ್ಕೆ ತೆರಳುವ ತಂಡಕ್ಕೆ ಆಯ್ಕೆಯಾದರೆ ರೀನಾ ಅವರಿಗೆ ಇದು ಮೊದಲ ಒಲಿಂಪಿಕ್ಸ್ ಆಗಲಿದೆ.

‘ಭವಿಷ್ಯದ ಬಗ್ಗೆ ಯೋಚಿಸಿದರೆ ಒತ್ತಡ ಹೆಚ್ಚಾಗುತ್ತದೆ. ಒಲಿಂಪಿಕ್ಸ್‌ ಆರಂಭಕ್ಕೆ ಇನ್ನು ಎರಡು ತಿಂಗಳಿಗಳಿಗಿಂತ ಕಡಿಮೆ ಅವಧಿ ಇರುವುದರಿಂದ ಕಠಿಣ ತಾಲೀಮು ನಡೆಸುತ್ತಿದ್ದೇವೆ. ಫಿಟ್‌ನೆಸ್ ಕಡೆಗೆ ಗಮನ ನೀಡಿದ್ದೇವೆ‘ ಎಂದು ರೀನಾ ಹೇಳಿದ್ದಾರೆ.

ADVERTISEMENT

‘ತಂಡದ ಅನಾಲಿಟಿಕಲ್‌ ಕೋಚ್‌ ಜಾನ್ನೆಕ್‌ ಶಾಪ್‌ಮನ್ ನಡೆದ ತರಬೇತಿ ಶಿಬಿರಗಳಿಂದ ನಮಗೆ ಬಹಳಷ್ಟು ಅನುಕೂಲವಾಗಿದೆ. ಶಾಂತ ಮನಸ್ಥಿತಿ, ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಲು ಸಹಾಯವಾಗಿವೆ‘ ಎಂದು 28 ವರ್ಷದ ರೀನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.