ADVERTISEMENT

ಮೈಸೂರು: ಚಳಿಗಾಲದ ರೇಸ್‌ ರದ್ದು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 23:57 IST
Last Updated 20 ಡಿಸೆಂಬರ್ 2025, 23:57 IST
<div class="paragraphs"><p>ಕುದುರೆ ರೇಸ್‌</p></div>

ಕುದುರೆ ರೇಸ್‌

   

(ಪ್ರಜಾವಾಣಿ ಸಂಗ್ರಹ ಚಿತ್ರ)

ಮೈಸೂರು: ಮೈಸೂರು ಟರ್ಫ್‌ ಕ್ಲಬ್‌ನಲ್ಲಿ ಬೀಡುಬಿಟ್ಟಿರುವ ಒಂದು ಕುದುರೆಯಲ್ಲಿ ಗ್ಲ್ಯಾಂಡರ್ಸ್‌ ರೋಗದ ಸೋಂಕು ದೃಢಪಟ್ಟ ಕಾರಣ ಇಲ್ಲಿ ನಿಗದಿಯಾಗಿದ್ದ ಚಳಿಗಾಲದ ಉಳಿದ ರೇಸ್‌ಗಳನ್ನು ರದ್ದು ಮಾಡಲಾಗಿದೆ ಎಂದು ಕ್ಲಬ್‌ ಶನಿವಾರ ತಿಳಿಸಿದೆ.

ADVERTISEMENT

ಮೈಸೂರು ರೇಸ್‌ಕೋರ್ಸ್‌ ಮತ್ತು ಸುತ್ತಮುತ್ತಲಿನ ಎರಡು ಕಿಲೋ ಮೀಟರ್‌ ಆವರಣವನ್ನು ಅಧಿಸೂಚಿತ ಪ್ರದೇಶವೆಂದು ಸರ್ಕಾರ ಗುರುತಿಸಿದೆ.  ಅಲ್ಲದೆ, ಈ ಪ್ರದೇಶದಲ್ಲಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಲ್ಲದೆ, ‘ಟರ್ಫ್‌ ಕ್ಲಬ್‌ ಅಥಾರಿಟೀಸ್‌ ಆಫ್‌ ಇಂಡಿಯಾ’ ಮೈಸೂರಿನಲ್ಲಿ ಫೆಬ್ರವರಿ 28 ಮತ್ತು ಮಾರ್ಚ್‌ 1ರಂದು ನಿಗದಿಪಡಿಸಿದ್ದ ‘ಇಂಡಿಯನ್‌ ಟರ್ಫ್‌ ಇನ್ವಿಟೇಷನ್‌ ಕಪ್‌’ ವಾರಾಂತ್ಯದ ರೇಸ್‌ಗಳನ್ನು ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.