
ಪ್ರಜಾವಾಣಿ ವಾರ್ತೆ
ಬೆಂಗಳೂರು: ನೈಋತ್ಯ ರೈಲ್ವೆ– ಹುಬ್ಬಳ್ಳಿ ತಂಡವು ‘ಹಾಕಿ ಕರ್ನಾಟಕ’ ಆಯೋಜಿಸಿರುವ ನಾಮಧಾರಿ ಕಪ್ ಟೂರ್ನಿಯ ಪಂದ್ಯದಲ್ಲಿ ಭಾನುವಾರ 7–2ರಿಂದ ಬಳ್ಳಾರಿ ತಂಡವನ್ನು ಸುಲಭವಾಗಿ ಮಣಿಸಿತು.
ನೈಋತ್ಯ ರೈಲ್ವೆ ತಂಡದ ಚೇತನ್ ಎಂ.ಕೆ. (1ನೇ ನಿ. ಹಾಗೂ 59ನೇ ನಿ.) ಹಾಗೂ ಪವನ್ ಮಡಿವಾಳರ್ (40ನೇ ನಿ. ಹಾಗೂ 50ನೇ ನಿ.) ತಲಾ ಎರಡು ಗೋಲು ಹೊಡೆದರೆ, ಪುನೀತ್ ಆರ್. (36ನೇ ನಿ.), ಕುಮಾರ್ ಎನ್. (52ನೇ ನಿ.) ಮತ್ತು ಜಯವಂತ್ ಪಿ. (56ನೇ ನಿ.) ಅವರು ತಲಾ ಒಮ್ಮೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು.
ಬಳ್ಳಾರಿ ತಂಡದ ಅರ್ಜುನ್ ಹಾಲಪ್ಪ (44ನೇ ನಿ.) ಹಾಗೂ ವಿಕ್ರಂ ಕಾಂತ್ (50ನೇ ನಿ.) ತಲಾ ಒಂದು ಗೋಲು ಹೊಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.