ADVERTISEMENT

ಗಗನ್‌ ನಾರಂಗ್‌, ಮೆಹುಲಿ ಘೋಷ್‌ಗಿಲ್ಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2018, 19:30 IST
Last Updated 30 ಜೂನ್ 2018, 19:30 IST
   

ನವದೆಹಲಿ (ಪಿಟಿಐ): ಭಾರತದ ಪ್ರಮುಖ ಶೂಟರ್‌ಗಳಾದ ಗಗನ್‌ ನಾರಂಗ್‌, ಜಿತು ರಾಯ್‌ ಹಾಗೂ ಮೆಹುಲಿ ಘೋಷ್‌ ಅವರು ಏಷ್ಯನ್‌ ಗೇಮ್ಸ್‌ಗಾಗಿ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನ ಗಳಿಸಲು ವಿಫಲರಾಗಿದ್ದಾರೆ.

ಲಂಡನ್‌ ಒಲಿಂಪಿಕ್‌ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದ ವಿಜಯ್‌ ಕುಮಾರ್‌ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಸ್ಟ್ಯಾಂಡರ್ಡ್‌ ಪಿಸ್ತೂಲ್‌ ಹಾಗೂ ಸೆಂಟರ್‌ ಫೈರ್‌ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಪುರುಷರ ತಂಡ ವಿಭಾಗದಲ್ಲಿ ರವಿ ಕುಮಾರ್‌ ಹಾಗೂ ದೀಪಕ್‌ ಕುಮಾರ್‌ ಅವರು ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ.

ADVERTISEMENT

ತಂಡ ಇಂತಿದೆ:

ಸೀನಿಯರ್‌ ರೈಫಲ್‌: ಪುರುಷರು (3 ಪೊಸಿಷನ್ಸ್‌): ಸಂಜೀವ್‌ ರಜಪೂತ್‌, ಅಖಿಲ್‌ ಶೆರಾನ್‌.

ಏರ್‌ ರೈಫಲ್‌: ರವಿ ಕುಮಾರ್‌, ದೀಪಕ್‌ ಕುಮಾರ್‌. 300 ಮೀಟರ್ಸ್‌ ಸ್ಟ್ಯಾಂಡರ್ಡ್‌ ರೈಫಲ್‌: ಹರ್ಜಿಂದರ್‌ ಸಿಂಗ್‌, ಅಮಿತ್‌ ಕುಮಾರ್‌. ಏರ್‌ ರೈಫಲ್‌ ಮಿಶ್ರ ವಿಭಾಗ: ರವಿ ಕುಮಾರ್‌, ಅಪೂರ್ವಿ ಚಾಂಡೇಲಾ.

ಮಹಿಳೆಯರು (3 ಪೊಸಿಷನ್ಸ್‌): ಅಂಜುಮ್‌ ಮೌದ್ಗಿಲ್‌, ಎನ್‌. ಗಾಯತ್ರಿ. ಏರ್‌ ರೈಫಲ್‌: ಅಪೂರ್ವಿ ಚಾಂಡೇಲಾ, ಎಲಾವೆನಿಲ್‌ ವಲರಿವನ್‌.

ಸೀನಿಯರ್‌ ಪಿಸ್ತೂಲ್‌: ಪುರುಷರು (ಏರ್‌ ಪಿಸ್ತೂಲ್‌): ಅಭಿಷೇಕ್‌ ವರ್ಮಾ, ಸೌರಭ್‌ ಚೌಧರಿ.

ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌: ಶುವಂ ಶುಕ್ಲಾ, ಅನಿಶ್‌; ಏರ್‌ ಪಿಸ್ತೂಲ್‌ ಮಿಶ್ರ ವಿಭಾಗ: ಅಭಿಷೇಕ್‌ ವರ್ಮಾ, ಮನು ಭಾಕರ್‌.

ಮಹಿಳೆಯರು: ಏರ್‌ ಪಿಸ್ತೂಲ್‌: ಮನು ಭಾಕರ್‌, ಹೀನಾ ಸಿಧು. ಸ್ಪೋರ್ಟ್ಸ್‌ ಶಾಟ್‌ಗನ್‌: ರಹಿ ಸರ್ನೋಬತ್‌, ಮನು ಭಾಕರ್‌. ಸೀನಿಯರ್‌ ಶಾಟ್‌ಗನ್‌ (ಪುರುಷರು): ಲಕ್ಷ್ಯ,ಮಾನವವಜೀತ್‌ ಸಿಂಗ್‌ ಸಂಧು. ಸ್ಕೀಟ್‌: ಶೀರಜ್‌ ಶೇಖ್‌, ಅಂಗಾದ್ವಿರ್‌ ಬಾಜ್ವಾ.

ಡಬಲ್‌ ಟ್ರ್ಯಾಪ್‌: ಅಂಕುರ್‌ ಮಿತ್ತಲ್‌, ಶ್ರಾದೂಲ್‌ ವಿಹಾನ್‌. ಟ್ರ್ಯಾಪ್‌ ಮಿಶ್ರ ವಿಭಾಗ: ಲಕ್ಷ್ಯ, ಶ್ರೇಯಸಿ ಸಿಂಗ್‌.

ಮಹಿಳೆಯರು: ಟ್ರ್ಯಾಪ್‌: ಶ್ರೇಯಸಿ ಸಿಂಗ್‌, ಸೀಮಾ ತೋಮರ್‌. ಸ್ಕೀಟ್‌: ಗನೇಮತ್‌ ಶೇಖೊನ್‌, ರಶ್ಮಿ ರಾಥೋಡ್‌. ಡಬಲ್ಸ್‌ ಟ್ರ್ಯಾಪ್‌: ಶ್ರೇಯಸಿ ಸಿಂಗ್‌, ವರ್ಷಾ ವರ್ಮನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.