ADVERTISEMENT

ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌: ಎಂಟರ ಘಟ್ಟಕ್ಕೆ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 16:09 IST
Last Updated 8 ಜನವರಿ 2026, 16:09 IST
ದೆಹಲಿ (ಬಲಗಡೆ) ತಂಡದ ಆಟಗಾರ್ತಿ ಮುನ್ನುಗ್ಗದಂತೆ ತಡೆಯುವ ಯತ್ನದಲ್ಲಿ ಕರ್ನಾಟಕದ ಶ್ರುತಿ ಅರವಿಂದ್.
ದೆಹಲಿ (ಬಲಗಡೆ) ತಂಡದ ಆಟಗಾರ್ತಿ ಮುನ್ನುಗ್ಗದಂತೆ ತಡೆಯುವ ಯತ್ನದಲ್ಲಿ ಕರ್ನಾಟಕದ ಶ್ರುತಿ ಅರವಿಂದ್.    

ಬೆಂಗಳೂರು: ಕರ್ನಾಟಕ ಮಹಿಳೆಯರ ತಂಡವು, ‘ಎ’ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಗುರುವಾರ ದೆಹಲಿ ವಿರುದ್ಧ 88–52 ರಲ್ಲಿ ಸುಲಭವಾಗಿ ಜಯಗಳಿಸಿ 75ನೇ ಸೀನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ತಲುಪಿತು.

ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಕರ್ನಾಟಕ ತಂಡ ಮೂರು ಪಂದ್ಯ ಗೆದ್ದು, ಒಂದು ಸೋತಿದೆ. ಸಂಜನಾ ರಮೇಶ್ ನೇತೃತ್ವದ  ಕರ್ನಾಟಕ ತಂಡವು ಎಂಟರ ಘಟ್ಟದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ.

ಕರ್ನಾಟಕ ತಂಡದ ಪರ ಶ್ರುತಿ ಅರವಿಂದ್ ಅಮೋಘವಾಗಿ ಆಡಿ 26 ಅಂಕ ಕಲೆಹಾಕಿದರು. ಸಹ ಆಟಗಾರ್ತಿಯರಾದ ಬಾಂಧವ್ಯಾ ಎಂ. ಮತ್ತು ನಿಧಿ ಉಮೇಶ್‌ ಕ್ರಮವಾಗಿ 13 ಮತ್ತು 12 ಅಂಕ ಗಳಿಸಿದರು. ದೆಹಲಿ ಪರ ಸುಮನ್ (12) ಮತ್ತು ನೇಹಾ ಹೂಡಾ (11) ಉತ್ತಮವಾಗಿ ಆಡಿದರು.

ADVERTISEMENT

ಕರ್ನಾಟಕದ ಪುರುಷರ ತಂಡ ‘ಎ’ ಗುಂಪಿನಿಂದ ಈಗಾಗಲೇ ಎಂಟರ ಘಟ್ಟ ತಲುಪಿದ್ದು, ಕ್ವಾರ್ಟರ್‌ಫೈನಲ್‌ನಲ್ಲಿ ದೆಹಲಿ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.