ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ 63ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಶುಕ್ರವಾರ ಪ್ರಾರಂಭವಾಗಲಿದೆ.
ಆತಿಥೇಯ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಪ್ರಕಾರ ದೇಶದಾದ್ಯಂತ 900 ಅಥ್ಲೀಟ್‌ಗಳು ಭಾಗವಹಿಸಲಿದ್ದಾರೆ. ರಾಜ್ಯದ 51 ಸ್ಪರ್ಧಿಗಳು ಕಣಕ್ಕೆ ಇಳಿಯಲಿದ್ದಾರೆ.
ಕ್ರೀಡೆಯನ್ನು ತಳಮಟ್ಟದಿಂದ ಉತ್ತೇಜಿಸುತ್ತಿರುವ ಭಾರತೀಯ ರೈಲ್ವೆ, ಎಲ್‌ಐಸಿ, ಐಒಸಿ ಮತ್ತು ರಿಲಯನ್ಸ್ ಫೌಂಡೇಷನ್‌ನ ಅಥ್ಲೀಟ್‌ಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ ಶಿರ್ಸೆ (110 ಮೀ ಹರ್ಡಲ್ಸ್), ಗುಲ್ವೀರ್ ಸಿಂಗ್ (5000 ಮೀ) ಮತ್ತು ಅಮ್ಲಾನ್ ಬೊರ್ಗೊಹೈನ್ (100 ಮೀ, 200 ಮೀ) ಹಾಗೂ ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಮೊಹಮ್ಮದ್ ಅಫ್ಸಲ್ (800 ಮೀ), ರಾಷ್ಟ್ರೀಯ ದಾಖಲೆ ಹೊಂದಿರುವ ರೋಸಿ ಮೀನಾ ಪೌಲ್ರಾಜ್ (ಪೋಲ್ ವಾಲ್ಟ್), ಮೌಮಿತಾ ಮೊಂಡಲ್ (ಹೆಪ್ಟಾಥ್ಲಾನ್), ಮಣಿಕಂಠ ಹೋಬಳಿಧರ್ (100 ಮೀ), ಗುರಿಂದರ್‌ವೀರ್ ಸಿಂಗ್ (100 ಮೀ), ಯಮನ್‌ದೀಪ್ ಶರ್ಮಾ (ಡೆಕಾಥ್ಲಾನ್), ಸಾಹಿಲ್ ಸಿಲ್ವಾಲ್ (ಜಾವೆಲಿನ್ ಥ್ರೋ) ಮತ್ತು ವಿಕ್ರಾಂತ್ ಮಲಿಕ್ (ಜಾವೆಲಿನ್ ಥ್ರೋ) ಈ ಕೂಟದಲ್ಲಿ ಭಾಗವಹಿಸುತ್ತಿರುವ ಪ್ರಮುಖ ಕ್ರೀಡಾಪಟುಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.