ADVERTISEMENT

ಡೈಮಂಡ್‌ ಲೀಗ್‌ ಫೈನಲ್‌: ನೀರಜ್‌ ಚೋಪ್ರಾ ಅರ್ಹ

ಪಿಟಿಐ
Published 17 ಆಗಸ್ಟ್ 2025, 20:13 IST
Last Updated 17 ಆಗಸ್ಟ್ 2025, 20:13 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ನವದೆಹಲಿ: ಭಾರತದ ಜಾವೆಲಿನ್‌ ಥ್ರೋ ತಾರೆ ನೀರಜ್‌ ಚೋಪ್ರಾ ಅವರು ಈ ತಿಂಗಳ ಅಂತ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಜೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್‌ಗೆ ಕ್ವಾಲಿಫೈ ಆಗಿದ್ದಾರೆ.

ಹಾಲಿ ವಿಶ್ವ ಚಾಂಪಿಯನ್‌ ಚೋಪ್ರಾ ಅವರು ಪೋಲೆಂಡ್‌ನ ಸಿಲೆಸಿಯಾದಲ್ಲಿ ಕಳೆದ ಶನಿವಾರ ನಡೆದ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸಿರಲಿಲ್ಲ. ಆಗಸ್ಟ್ 22ರಂದು ನಡೆಯಲಿರುವ ಬ್ರಸೆಲ್ಸ್‌ ಆವೃತ್ತಿಯಲ್ಲಿಯೂ ಅವರು ಸ್ಪರ್ಧಿಸುವ ಖಚಿತತೆ ಇಲ್ಲ. ಆದಾಗ್ಯೂ, 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಅವರು ಜೂರಿಚ್‌ ಡೈಮಂಡ್‌ ಲೀಗ್‌ ಫೈನಲ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಟ್ರಿನಿಡಾಡ್‌–ಟೊಬ್ಯಾಗೊದ ಕೆಶೋರ್ನ್ ವಾಲ್‌ಕಾಟ್ (17) ಹಾಗೂ ಜರ್ಮನಿಯ ಜೂಲಿಯನ್ ವೆಬರ್ (15) ಅವರು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ADVERTISEMENT

ಜೂನ್‌ನಲ್ಲಿ ನಡೆದ ಪ್ಯಾರಿಸ್ ಡೈಮಂಡ್‌ ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚೋಪ್ರಾ, ಮೇ ತಿಂಗಳಲ್ಲಿ ನಡೆದ ದೋಹಾ ಡೈಮಂಡ್‌ ಲೀಗ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು.

Highlights - Neeraj Chopra qualifies for Diamond League 2025 final in Zurich New Delhi, Aug 17 (PTI) Star Indian javelin thrower Neeraj Chopra has qualified for the Diamond League 2025 Final in Zurich, Switzerland scheduled to be held on August 27 and 28. Chopra, the reigning world champion, didn't participate in Diamond League Meeting in Silesia, Poland, on August 16. His participation in the Brussels leg on August 22 is also not yet known. However, it doesn't matter as the Indian ace has already booked his berth in the DL Final, as per the latest standings released after the Silesia leg on Saturday. With 15 points from two DL meetings, from one title and one second-place finish, the two-time Olympic medallist has already sealed his qualification for the winner-takes-all finale. Chopra is placed at third spot behind Keshorn Walcott (17) and Julian Weber (15) in the standing. The top six after the Brussels leg will make it to the DL Finals in Zurich. Chopra's last competition was at the NC Classic on July 5 in Bengaluru where he threw 86.18m to win the title at the event he himself hosted. The 27-year-old reigning world champion went past the coveted 90m mark in the Doha DL in May with a throw of 90.23m but finished second behind Weber. He then won the Paris DL title with a throw of 88.16m in June. Chopra will defend the title at the World Championships to be held in Tokyo from September 13-21.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.