ADVERTISEMENT

ಉತ್ತಮ ಆರಂಭ ಖುಷಿ ನೀಡಿದೆ: ನೀರಜ್‌ ಚೋಪ್ರಾ

ಪಿಟಿಐ
Published 6 ಮೇ 2023, 19:18 IST
Last Updated 6 ಮೇ 2023, 19:18 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ದೋಹಾ: ‘ಈ ಋತುವಿನ ಡೈಮಂಡ್‌ ಲೀಗ್ ಕೂಟವನ್ನು ಗೆಲುವಿನೊಂದಿಗೆ ಆರಂಭಿಸಿರುವುದು ಖುಷಿ ನೀಡಿದೆ’ ಎಂದು ಭಾರತದ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಹೇಳಿದ್ದಾರೆ.

ಶುಕ್ರವಾರ ಇಲ್ಲಿ ನಡೆದಿದ್ದ ಮೊದಲ ಲೆಗ್‌ನ ಕೂಟದಲ್ಲಿ ಚೋಪ್ರಾ, 88.67 ಮೀಟರ್ಸ್ ಸಾಧನೆಯೊಂದಿಗೆ ಅಗ್ರಸ್ಥಾನ ಗಳಿಸಿದ್ದರು. 25 ವರ್ಷದ ನೀರಜ್‌ ಅವರ ವೃತ್ತಿಜೀವನದ ನಾಲ್ಕನೇ ಶ್ರೇಷ್ಠ ಪ್ರದರ್ಶನ ಇದಾಗಿತ್ತು.

‘ಸ್ಪರ್ಧೆಯು ಪೈಪೋಟಿಯಿಂದ ಕೂಡಿತ್ತು. ಗೆಲುವಿನ ಆರಂಭ ಪಡೆದಿರುವುದು ಸಂತಸ ಉಂಟುಮಾಡಿದೆ’ ಎಂದು ಪ್ರತಿಕ್ರಿಯಿಸಿರುವ ಅವರು, ಮುಂದಿನ ಕೂಟಗಳಲ್ಲಿ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಈ ಋತುವಿನಲ್ಲಿ ಫಿಟ್‌ನೆಸ್‌ ಉಳಿಸಿಕೊಂಡು, ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಪ್ರಯತ್ನಿಸಲಿದ್ದೇನೆ. ಮುಂದಿನ ಸ್ಪರ್ಧೆಯಲ್ಲೂ ಅಗ್ರಸ್ಥಾನ ಪಡೆಯುವುದು ಗುರಿ’ ಎಂದಿದ್ದಾರೆ.

ನೀರಜ್‌ ಅವರು ಶುಕ್ರವಾರ ಮೊದಲ ಸುತ್ತಿನಲ್ಲೇ 88.67 ಮೀ. ದೂರ ಜಾವೆಲಿನ್ ಎಸೆದಿದ್ದರು. ಜೆಕ್ ಗಣರಾಜ್ಯದ ಜಾಕುಬ್‌ ವಡ್ಲೆಚ್‌ (88.63 ಮೀ.) ಬೆಳ್ಳಿ ಹಾಗೂ ಹಾಲಿ ವಿಶ್ವ ಚಾಂಪಿಯನ್‌, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (85.88 ಮೀ.) ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.

ಎಲ್ದೋಸ್‌ಗೆ 10ನೇ ಸ್ಥಾನ: ದೋಹಾದಲ್ಲಿ ಕಣದಲ್ಲಿದ್ದ ಭಾರತದ ಟ್ರಿಪಲ್‌ ಜಂಪ್‌ ಸ್ಪರ್ಧಿ ಎಲ್ದೋಸ್‌ ಪಾಲ್‌ 10ನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.