ADVERTISEMENT

ವಿಶ್ವ ಅಥ್ಲೆಟಿಕ್ಸ್‌: ನೀರಜ್‌ ಚೋಪ್ರಾ ನೇತೃತ್ವದ 28 ಮಂದಿಯ ಭಾರತ ತಂಡ ಪ್ರಕಟ

ಪಿಟಿಐ
Published 8 ಆಗಸ್ಟ್ 2023, 11:36 IST
Last Updated 8 ಆಗಸ್ಟ್ 2023, 11:36 IST
ನೀರಜ್‌ ಚೋಪ್ರಾ
ನೀರಜ್‌ ಚೋಪ್ರಾ   

ನವದೆಹಲಿ: ಒಲಿಂಪಿಕ್‌ ಚಾಂಪಿಯನ್‌ ಜಾವೆಲಿನ್‌ ಥ್ರೊ ಸ್ಪರ್ಧಿ ನೀರಜ್‌ ಚೋಪ್ರಾ ಹಂಗೆರಿಯ ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ 19ರಿಂದ ಆರಂಭವಾಗುವ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ 28 ಸದಸ್ಯರ ಭಾರತ ತಂಡದ ಅಭಿಯಾನದ ನೇತೃತ್ವ ವಹಿಸುವರು.

ಅಚ್ಚರಿಯ ಸಂಗತಿ ಎಂದರೆ ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ಬದಲು ಕ್ರೀಡಾ ಸಚಿವಾಲಯವೇ ತಂಡವನ್ನು ಪ್ರಕಟಿಸಿದೆ.

ತೊಡೆಯ ನೋವಿನಿಂದಾಗಿ ಷಾಟ್‌ಪಟ್‌ ಸ್ಪರ್ಧಿ, ಏಷ್ಯನ್ ದಾಖಲೆ ವೀರ ತಜಿಂದರ್‌ ಪಾಲ್ ತೂರ್ ಅವರು ವಿಶ್ವ ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ. ಜುಲೈನಲ್ಲಿ ಏಷ್ಯನ್‌ ಚಾಂಪಿಯನ್‌ಷಿಪ್‌ ವೇಳೆ ನೋವಿಗೊಳಗಾಗಿದ್ದರು.

ADVERTISEMENT

ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್‌ ಶಂಕರ್, 800 ಮೀ. ಓಟಗಾರ್ತಿ  ಕೆ.ಎಂ.ಚಂದಾ ಮತ್ತು 20 ಕಿಮೀ. ರೇಸ್‌ ವಾಕರ್‌ ಪ್ರಿಯಾಂಕಾ ಗೋಸ್ವಾಮಿ ಅವರು ಏಷ್ಯನ್‌ ಗೇಮ್ಸ್‌ ಕಡೆ ಗಮನ ಹರಿಸುವ ಉದ್ದೇಶದಿಂದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಏಷ್ಯನ್‌ ಗೇಮ್ಸ್‌ ಸೆ. 23 ರಿಂದ ಅಕ್ಟೋಬರ್ 8ರವರೆಗೆ ಚೀನಾದ ಹಾಂಗ್‌ ಝೌದಲ್ಲಿ ನಡೆಯಲಿದೆ.

ಹಾಲಿ ಡೈಮಂಡ್ ಲೀಗ್ ಚಾಂಪಿಯನ್ ಚೋಪ್ರಾ ಅವರು ಈ ಬಾರಿ ಚಿನ್ನ ಗೆಲ್ಲುವ ನಿರೀಕ್ಷೆಯಿದೆ. 2022ರಲ್ಲಿ ಯುಜೀನ್‌ನಲ್ಲಿ ನಡೆದ ಕೂಟದಲ್ಲಿ ಅವರು ಬೆಳ್ಳಿಯ ಪದಕ ಗಳಿಸಿದ್ದರು.

ತಂಡ ಇಂತಿದೆ:

ಮಹಿಳೆಯರು: ಜ್ಯೋತಿ ಯೆರ‍್ರಾಜಿ (110 ಮೀ. ಹರ್ಡಲ್ಸ್‌), ಪಾರುಲ್ ಚೌಧರಿ (3000 ಮೀ. ಸ್ಟೀಪಲ್‌ ಚೇಸ್‌), ಶೈಲಿ ಸಿಂಗ್‌ (ಲಾಂಗ್‌ಜಂಪ್‌), ಅನ್ನುರಾಣಿ (ಜಾವೆಲಿನ್ ಥ್ರೊ), ಭಾವ್ನಾ ಜಾಟ್‌ (20 ಕಿ.ಮೀ. ರೇಸ್ ವಾಕ್‌).

ಪುರುಷರು: ಕಿಶನ್ ಕುಮಾರ್ (800 ಮಿ.), ಅಜಯ್ ಕುಮಾರ್ ಸರೋಜ್ (1,500 ಮೀ.), ಸಂತೋಷ್ ಕುಮಾರ್ ತಮಿಳರಸನ್ (400 ಮೀ. ಹರ್ಡಲ್ಸ್‌), ಅವಿನಾಶ್ ಮುಕುಂದ್ ಸಬ್ಳೆ (3000 ಮೀ.ಸ್ಟೀಪಲ್‌ಚೇಸ್‌), ಸರ್ವೇಶ್ ಅನಿಲ್ ಕುಶಾರೆ (ಹೈಜಂಪ್‌), ಜೆಸ್ವಿನ್‌ ಆಲ್ಟ್ರಿನ್, ಎಂ.ಶ್ರೀಶಂಕರ್ (ಇಬ್ಬರೂ ಲಾಂಗ್‌ಜಂಪ್‌), ಪ್ರವೀಣ್‌ ಚಿತ್ರವೇಲ್, ಅಬ್ದುಲ್ಲಾ ಅಬೂಬಕ್ಕರ್‌, ಎಲ್ಡೋಸ್‌ ಪೌಲ್‌ (ಮೂವರೂ ಟ್ರಿಪಲ್‌ ಜಂಪ್‌), ನೀರಜ್ ಚೋಪ್ರಾ, ಡಿ.ಪಿ. ಮನು, ಕಿಶೋರ್ ಕುಮಾರ್ ಜೇನಾ (ಮೂವರೂ ಜಾವೆಲಿನ್‌ ಥ್ರೊ), ಆಕಾಶ್‌ ದೀಪ್‌ ಸಿಂಗ್‌, ವಿಕಾಶ್ ಸಿಂಗ್‌, ಪರಮಜೀತ್‌ ಸಿಂಗ್‌ (20 ಕಿ.ಮೀ. ರೇಸ್‌ ವಾಕ್‌), ರಾಮ್‌ ಬಾಬೂ (35 ಕಿ.ಮೀ. ರೇಸ್‌ ವಾಕ್‌), ಅಮೋಜ್ ಜಾಕೋಬ್, ಮುಹಮ್ಮದ್ ಅಜ್ಮಲ್‌, ಮುಹಮ್ಮದ್ ಅನಾಸ್‌, ರಾಜೇಶರ್ ರಮೇಶ್, ಅನಿಲ್‌ ರಜಲಿಂಗಮ್, ಮಿಜೊ ಚಾಕೊ ಕುರಿಯನ್ (ಪುರುಷರ 4x400 ಮೀ. ರಿಲೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.