ADVERTISEMENT

ಪ್ರೀ ಕ್ವಾರ್ಟರ್‌ಗೆ ರಾಜ್ಯ ತಂಡಗಳು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 20:26 IST
Last Updated 8 ನವೆಂಬರ್ 2019, 20:26 IST

ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ನವದೆಹಲಿಯ ಮೈತ್ರೇಯಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ತನ್ನ ಪಾಲಿನ ಎರಡನೇ ಲೀಗ್‌ ಪಂದ್ಯದಲ್ಲಿ ರಾಜ್ಯ ಬಾಲಕಿಯರ ತಂಡ 21–8 ಪಾಯಿಂಟ್ಸ್‌ನಿಂದ ಬಿಹಾರದ ಎದುರು ಗೆದ್ದಿತು.

ಬಾಲಕರ ವಿಭಾಗದ ಹಣಾಹಣಿಯಲ್ಲಿ ಕರ್ನಾಟಕ 23–13 ಪಾಯಿಂಟ್ಸ್‌ನಿಂದ ಚಂಡೀಗಡ ತಂಡವನ್ನು ಪರಾಭವಗೊಳಿಸಿತು.

ADVERTISEMENT

ಹದಿನಾರರ ಘಟ್ಟದ ಪಂದ್ಯಗಳು ಶನಿವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.