ADVERTISEMENT

25ರಂದು ನವದೆಹಲಿ ಮ್ಯಾರಥಾನ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 16:26 IST
Last Updated 12 ಫೆಬ್ರುವರಿ 2024, 16:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ : ಭಾರತ ಅಥ್ಲೆಟಿಕ್‌ ಫೆಡರೇಷನ್‌ನ (ಎಎಫ್‌ಐ) ರಾಷ್ಟ್ರೀಯ ಕ್ರೀಡಾಕೂಟ ಮತ್ತು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತಾ ಕೂಟವೆಂದೇ ಗುರುತಿಸಿರುವ 9ನೇ ಆವೃತ್ತಿಯ ‘ನವದೆಹಲಿ ಮ್ಯಾರಥಾನ್’ ಇದೇ 25ರಂದು ಇಲ್ಲಿನ ಜೆಎಲ್‌ಎನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪುರುಷ ಮತ್ತು ಮಹಿಳೆಯರ ವಿಭಾಗದ ಮ್ಯಾರಥಾನ್‌ ವಿಜೇತರು ತಲಾ ₹ 1.5 ಲಕ್ಷ ಮತ್ತು ಎರಡನೇ ಸ್ಥಾನ ಪಡೆಯುವವರು ತಲಾ ₹ 1ಲಕ್ಷ ಬಹುಮಾನ ಪಡೆಯುವರು.

ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಕ್ರಮವಾಗಿ 2 ಗಂಟೆ 8 ನಿಮಿಷ 10 ಸೆಕೆಂಡ್‌ ಮತ್ತು 2 ಗಂಟೆ 26 ನಿಮಿಷ 50 ಸೆಕೆಂಡ್‌ನ ಒಳಗಾಗಿ ಗುರಿಯನ್ನು ತಲುಪಬೇಕಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ಅಥ್ಲೀಟ್‌ಗಳು ಅರ್ಹತೆ ಪಡೆಯಲು ವಿಫಲವಾಗಿದ್ದರು. ಈ ಬಾರಿಯೂ ಈತನಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಯಾರೂ ಅರ್ಹತೆ ಪಡೆದಿಲ್ಲ. ಅರ್ಹತಾ ವಿಂಡೋ ಜೂನ್ 30ರಂದು ಮುಕ್ತಾಯವಾಗಲಿದೆ.

ಕಳೆದ ಆವೃತ್ತಿಯಲ್ಲಿ ಪುರುಷರ ಎಲೈಟ್ ವಿಭಾಗದಲ್ಲಿ ಮಾನ್ ಸಿಂಗ್ (2 ಗಂಟೆ 14 ನಿಮಿಷ 13 ಸೆಕೆಂಡ್‌) ಚಿನ್ನ ಗೆದ್ದರೆ, ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಶಂಕರ್ (2 ಗಂಟೆ 53 ನಿಮಿಷ 4 ಸೆಕೆಂಡ್‌) ಅಗ್ರಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.