ಪುರುಷರ 200 ಮೀ (ಟಿ 64) ಓಟದಲ್ಲಿ ಭಾರತದ ನರೇಶ್ ಮತ್ತು ಜಪಾನ್‌ನ ಯುಮಾ ತಮಾಕಿ ಸ್ಪರ್ಧಿಸಿದರು
ನವದೆಹಲಿ: ಗುರುವಾರ ಇಲ್ಲಿ ಮುಕ್ತಾಯಗೊಂಡ ನವದೆಹಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾನ್‌ಪ್ರಿ ಕೂಟ ಇನ್ನು 2028ರವರೆಗೆ ಪ್ರತಿ ವರ್ಷ ನಡೆಯಲಿದೆ. ಈ ಸಂಬಂಧ ಭಾರತ ಮತ್ತು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಡುವೆ ಒಪ್ಪಂದಕ್ಕೆ ಸಹಿಹಾಕಲಾಯಿತು.
ನವದೆಹಲಿಯ ವಿಶ್ವ ಪ್ಯಾರಾ ಗ್ರ್ಯಾನ್‌ಪ್ರಿ ಕೂಟ, ಮೊತ್ತ ಮೊದಲ ಅಂತರರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಕೂಟ ಎನಿಸಿತು. ‘2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್ ನಡೆಯುವ ತನಕ ಪ್ರತಿ ವರ್ಷ ಕೂಟ ನಡೆಸಲು ಭಾರತವು ಒಪ್ಪಂದಕ್ಕೆ ಸಹಿ ಮಾಡಿದೆ. ಹೀಗಾಗಿ ನವದೆಹಲಿ ಗ್ರ್ಯಾನ್‌ಪ್ರಿ ಕೂಟ ಇನ್ನು ನಾಲ್ಕು ವರ್ಷ ನಡೆಯಲಿದೆ ಎಂದು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಕಾಂಪಿಟೀಷನ್ಸ್ ಸೀನಿಯರ್ ಮ್ಯಾನೇಜರ್ ಮಾರ್ಟಿನ್ ಕೋರ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.
ನವದೆಹಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಆತಿಥ್ಯವನ್ನು ಇದೇ ವರ್ಷದ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.