ನ್ಯೂಯಾರ್ಕ್: ಇಥಿಯೋಪಿಯಾದ ಲೇಸಿಯಾ ದೇಸಿಸಾ ಅವರು ಭಾನುವಾರ ನಡೆದ ನ್ಯೂಯಾರ್ಕ್ ಸಿಟಿ ಮ್ಯಾರಥಾನ್ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ.
ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ದೇಸಿಸಾ 2 ಗಂಟೆ 5 ನಿಮಿಷ 59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇಥಿಯೋಪಿಯಾದ ಮತ್ತೊಬ್ಬ ಓಟಗಾರ ಶುರಾ ಕಿಟಾಟ, ಎರಡನೇ ಸ್ಥಾನ ಗಳಿಸಿದರು.ಅವರು ನಿಗದಿತ ದೂರ ಕ್ರಮಿಸಲು 2 ಗಂಟೆ 6 ನಿಮಿಷ 01 ಸೆಕೆಂಡು ತೆಗೆದುಕೊಂಡರು. ಕೀನ್ಯಾದ ಜಿಯೊಫ್ರೆ ಕಮವೊರೊರ್ (2:06.26ಸೆ.) ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.