ADVERTISEMENT

ಕ್ರೀಡಾ ಸಚಿವಾಲಯಕ್ಕೆ ನೋಟಿಸ್

ಪಿಟಿಐ
Published 10 ಜೂನ್ 2022, 19:46 IST
Last Updated 10 ಜೂನ್ 2022, 19:46 IST

ನವದೆಹಲಿ: ಮಹಿಳಾ ಸೈಕ್ಲಿಸ್ಟ್‌ವೊಬ್ಬರು ರಾಷ್ಟ್ರೀಯ ತಂಡದ ಕೋಚ್‌ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್‌ಎಚ್‌ಆರ್‌ಸಿ) ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌) ನೋಟಿಸ್‌ ಜಾರಿಗೊಳಿಸಿದೆ.

ಘಟನೆಯನ್ನು ಸ್ವಯಂಪ್ರೇರಿತವಾಗಿ ತನಿಖೆಗೆ ಎತ್ತಿಕೊಂಡಿರುವ ಆಯೋಗವು, ಈ ಬಗ್ಗೆ ಕ್ರೀಡಾ ಸಚಿವಾಲಯ ಮತ್ತು ಪ್ರಾಧಿಕಾರದಿಂದ ವಿವರವಾದ ವರದಿ ಕೇಳಿದೆ.

‘ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿದ್ದ ಸೈಕ್ಲಿಸ್ಟ್‌ಅನ್ನು ವಿದೇಶದಿಂದ ವಾಪಸ್‌ ಕರೆಸಲಾಗಿತ್ತು. ಕಿರುಕುಳದ ಆರೋಪ ಹೊತ್ತಿರುವ ಕೋಚ್‌ಅನ್ನು ವಾಪಸ್‌ ಕರೆಸುವ ಬದಲು, ಸಂತ್ರಸ್ತೆಯನ್ನು ಕರೆಸಿದ್ದು ಸರಿಯಲ್ಲ. ಇದರಿಂದ ಆಕೆ ತರಬೇತಿಯಿಂದ ವಂಚಿತಳಾಗಿದ್ದಾಳೆ’ ಎಂದು ಆಯೋಗ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.