ADVERTISEMENT

Norway Chess 2025: ಅಮೆರಿಕದ ನಕಮುರಾಗೆ ಮಣಿದ ವಿಶ್ವ ಚಾಂಪಿಯನ್ ಗುಕೇಶ್

ಏಜೆನ್ಸೀಸ್
Published 4 ಜೂನ್ 2025, 6:07 IST
Last Updated 4 ಜೂನ್ 2025, 6:07 IST
<div class="paragraphs"><p>ಡಿ.ಗುಕೇಶ್</p></div>

ಡಿ.ಗುಕೇಶ್

   

ಪಿಟಿಐ ಚಿತ್ರ

ಸ್ಟಾವೆಂಜರ್‌ (ನಾರ್ವೆ): ನಾರ್ವೆ ಚೆಸ್ ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್, ಭಾರತದ ಡಿ.ಗುಕೇಶ್ ಅವರ ಗೆಲುವಿನ ಓಟಕ್ಕೆ ತಡೆಯೊಡ್ಡಿದ ಅಮೆರಿಕದ ಗ್ರ್ಯಾಂಡ್‌ ಮಾಸ್ಟರ್‌ ಹಿಕಾರು ನಕಮುರಾ, ಮೂರು ಪಾಯಿಂಟ್‌ಗಳನ್ನು ಪಡೆದುಕೊಂಡರು.

ADVERTISEMENT

ವಿಶ್ವದ ನಂ.2 ಆಟಗಾರ ನಕಮುರಾ ಅವರು ಕ್ಲಾಸಿಕಲ್‌ ಸ್ಪರ್ಧೆಯಲ್ಲಿ 19 ವರ್ಷದ ಗುಕೇಶ್‌ ಎದುರು ಸುಲಭ ಜಯ ಸಾಧಿಸಿದರು. ಸುಮಾರು ನಾಲ್ಕು ಗಂಟೆಗಳ ಸ್ಪರ್ಧೆಯಲ್ಲಿ ಎದುರಾಳಿಗೆ ಒಂದಿಂಚೂ ಮುನ್ನಡೆ ಬಿಟ್ಟುಕೊಡದೆ ಆಡುವ ಮೂಲಕ ಮೂರನೇ ಸುತ್ತಿನಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

ಟೂರ್ನಿಯಲ್ಲಿ ನಿರಾಶಾದಾಯಕ ಆರಂಭ ಕಂಡರೂ ಬಳಿಕ ಚೇತರಿಕೆಯ ಆಟವಾಡಿದ್ದ ಗುಕೇಶ್‌, 6 ಮತ್ತು 7ನೇ ಸುತ್ತಿನಲ್ಲಿ ಕಾರ್ಲ್‌ಸನ್‌ ಹಾಗೂ ಭಾರತದವರೇ ಆದ ಅರ್ಜುನ್‌ ಇರಿಗೇಶಿ ಅವರನ್ನು ಮಣಿಸಿದ್ದರು.

ಇತ್ತ, ಇರಿಗೇಶಿ ಅವರು ಅಮೆರಿಕದ ಫ್ಯಾಬಿಯಾನೊ ಕರುವಾನಾ ಎದುರು ಜಯ ಸಾಧಿಸುವ ಮೂಲಕ ಜಯದ ಹಳಿಗೆ ಮರಳಿದ್ದಾರೆ. ಇರಿಗೇಶಿ ಅವರು ಅವರು ಕರುವಾನಾ ಅವರನ್ನು ಎಂಟನೇ ಸುತ್ತಿನಲ್ಲಿ ಸೋಲಿಸಿದರು.

ಈ ಸೋಲಿನ ಹೊರತಾಗಿಯೂ ಕರುವಾನಾ ಅವರು 12.5 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಕಮುರಾ ಹಾಗೂ ಗುಕೇಶ್‌ ತಲಾ 11.5 ಅಂಕಗಳೊಂದಿಗೆ ಮೂರು, ನಾಲ್ಕನೇ ಸ್ಥಾನದಲ್ಲಿದ್ದಾರೆ.

ಚೀನಾದ ವೀ ಯಿ ವಿರುದ್ಧ ಸೋಲು ಕಂಡಿರುವುದರ ಹೊರತಾಗಿಯೂ ಕಾರ್ಲ್‌ಸನ್‌ 12 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇರಿಗೇಶಿ (10.5 ಅಂಕ) ಹಾಗೂ ವೀ ಯಿ (8 ಅಂಕ) ಕ್ರಮವಾಗಿ 5 ಹಾಗೂ 6ನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.