ADVERTISEMENT

ಬ್ಯಾಡ್ಮಿಂಟನ್‌: ಎರಡನೇ ಸುತ್ತಿಗೆ ತರುಣ್‌, ಕಿರಣ್‌

ಪಿಟಿಐ
Published 9 ಡಿಸೆಂಬರ್ 2025, 16:21 IST
Last Updated 9 ಡಿಸೆಂಬರ್ 2025, 16:21 IST
ಕಿರಣ್‌ ಜಾರ್ಜ್‌
ಕಿರಣ್‌ ಜಾರ್ಜ್‌   

ಕಟಕ್‌: ಮೊದಲೆರಡು ಶ್ರೇಯಾಂಕ ಪಡೆದಿರುವ ತರುಣ್ ಮನ್ನೇಪಲ್ಲಿ ಮತ್ತು ಕಿರಣ್‌ ಜಾರ್ಜ್‌ ಅವರು ಮಂಗಳವಾರ ಒಡಿಶಾ ಮಾಸ್ಟರ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಬೈ ಪಡೆದು ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು.

ತರುಣ್ ಮತ್ತು ಕಿರಣ್ ಅವರೊಂದಿಗೆ ನಾಲ್ಕನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್, ಆರನೇ ಶ್ರೇಯಾಂಕದ ಮನರಾಜ್ ಸಿಂಗ್, ಏಳನೇ ಶ್ರೇಯಾಂಕದ ಎಸ್. ಶಂಕರ್ ಮುತ್ತುಸಾಮಿ ಸುಬ್ರಮಣಿಯನ್, ಎಂಟನೇ ಶ್ರೇಯಾಂಕದ ರಿತ್ವಿಕ್ ಸಂಜೀವಿ ಕೂಡ ಮೊದಲ ಸುತ್ತಿನಲ್ಲಿ ಬೈ ಪಡೆದರು.

ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆವಿನ್‌ ತಂಗಂ 21-18, 19-21, 21-16 ಅಂತರದಲ್ಲಿ ಸ್ವದೇಶದ ಆರ್ಯಮನ್ ಟಂಡನ್ ಅವರನ್ನು ಸೋಲಿಸಿದರೆ; ತುಷಾರ್ ಸುವೀರ್ 21-19, 8-21, 21-14ರಿಂದ ಆಲಪ್ ಮಿಶ್ರಾ ಅವರನ್ನು ಮಣಿಸಿದರು.

ADVERTISEMENT

ಮತ್ತೊಂದು ಪಂದ್ಯದಲ್ಲಿ ದರ್ಶನ್ ಪೂಜಾರಿ 21-9, 21-12 ಅಂತರದಿಂದ ಅಮೆರಿಕದ ಕೆವಿನ್ ಅರೋಕಿಯಾ ವಾಲ್ಟರ್ ಅವರನ್ನು ಸೋಲಿಸಿದರು. ಟೂರ್ನಿಯು ಒಟ್ಟು ₹98.86 ಲಕ್ಷ ಬಹುಮಾನ ಮೊತ್ತವನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.