ADVERTISEMENT

ಒಲಿಂಪಿಯನ್‌ ಈಜುಪಟು ಶ್ರೀಹರಿ ರಾಷ್ಟ್ರೀಯ ದಾಖಲೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:26 IST
Last Updated 2 ಜೂನ್ 2025, 23:26 IST
<div class="paragraphs"><p>ಚಿನ್ನದ ಪದಕದೊಂದಿಗೆ ಶ್ರೀಹರಿ</p></div>

ಚಿನ್ನದ ಪದಕದೊಂದಿಗೆ ಶ್ರೀಹರಿ

   

ಬೆಂಗಳೂರು: ಒಲಿಂಪಿಯನ್‌ ಈಜುಪಟು ಶ್ರೀಹರಿ ನಟರಾಜ್‌ ಅವರು  ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 200 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಸಾಧನೆ ಮಾಡಿದ್ದಾರೆ.

ಕರ್ನಾಟಕದ 24 ವರ್ಷ ವಯಸ್ಸಿನ ಶ್ರೀಹರಿ ಅವರು 1 ನಿಮಿಷ 48.66 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಮೂಲಕ 2021ರಲ್ಲಿ ಸಾಜನ್ ಪ್ರಕಾಶ್ (1ನಿ.49.73ಸೆ) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. 

ADVERTISEMENT

ಸಿಂಗಪುರದ ಝೆಂಗ್ ವೆನ್ ವುಹ್ (1ನಿ.48.94ಸೆ) ಬೆಳ್ಳಿ ಪದಕ ಗೆದ್ದರೆ, ಅದೇ ದೇಶದ ಆರ್ಡಿ ಅಜ್ಮಾನ್ (1ನಿ.49.91ಸೆ) ಕಂಚಿನ ಪದಕ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.