ADVERTISEMENT

ರಷ್ಯಾ ವಿರುದ್ಧ ಐಒಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 18:54 IST
Last Updated 28 ಫೆಬ್ರುವರಿ 2022, 18:54 IST
-
-   

ಜಿನಿವಾ (ಎಪಿ): ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದ ವಿರುದ್ಧ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತೀವ್ರ ಆಕ್ರೋಶವ್ಯಕ್ತಪಡಿಸಿದೆ.

ಕ್ರೀಡಾಕೂಟಗಳು ಮತ್ತು ಚಟುವಟಿಕೆಗಳಿಂದ ರಷ್ಯಾದ ಆಟಗಾರರು ಮತ್ತು ಅಧಿಕಾರಿಗಳನ್ನು ಕೈಬಿಡಬೇಕು ಎಂದು ಎಲ್ಲ ಕ್ರೀಡಾ ಫೆಡರೇಷನ್‌ಗಳಿಗೆ ಐಒಸಿ ಮನವಿ ಮಾಡಿದೆ.

‘ಜಾಗತಿಕ ಕ್ರೀಡಾ ವಲಯದಲ್ಲಿ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಬೇಕು. ಸ್ಪರ್ಧಾಳುಗಳ ಸುರಕ್ಷತೆಯೂ ಮುಖ್ಯ’ ಎಂದು ಐಒಸಿ ತಿಳಿಸಿದೆ.

ADVERTISEMENT

ಈ ನಿರ್ಣಯದ ಬೆನ್ನಲ್ಲಿಯೇ ಫಿಫಾ ಮಾರ್ಚ್‌ 24ರಂದು ನಡೆಯಲಿರುವ ವಿಶ್ವಕಪ್ ಅರ್ಹತಾ ಪ್ಲೇ ಆಫ್‌ನಿಂದ ರಷ್ಯಾ ತಂಡವನ್ನು ಕೈಬಿಟ್ಟಿದೆ. ರಷ್ಯಾ ವಿರುದ್ಧದ ಪಂದ್ಯದಲ್ಲಿ ಆಡಲು ಪೊಲೆಂಡ್ ನಿರಾಕರಿಸಿದೆ.

ಐಒಸಿಯ ನಿರ್ಧಾರವು ಬೆಲಾರೂಸ್ ಅಥ್ಲೀಟ್‌ಗಳು ಮತ್ತು ಅಧಿಕಾರಿಗಳಿಗೂ ಅನ್ವಯಿಸಲಿದೆ. ಬೆಲಾರೂಸ್ ರಷ್ಯಾಗೆ ಬೆಂಬಲ ನೀಡುತ್ತಿದೆ. ರಷ್ಯನ್ ಸೇನೆಗೆ ತನ್ನ ನೆಲದಲ್ಲಿ ನೆಲೆ ಒದಗಿಸಿದೆ. ಆದ್ದರಿಂದ ಬೆಲಾರೂಸ್ ಕೂಡ ಐಒಸಿ ಕೆಂಗಣ್ಣಿಗೆ ಗುರಿಯಾಗಿದೆ.

‘ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ರಷ್ಯಾ ಮತ್ತು ಬೆಲಾರೂಸ್‌ನ ಅಥ್ಲೀಟ್‌ಗಳು ಭಾಗವಹಿಸಬಹುದು. ಆದರೆ, ತಮ್ಮ ದೇಶದ ಧ್ವಜ, ಚಿಹ್ನೆ ಅಥವಾ ರಾಷ್ಟ್ರಗೀತೆಯನ್ನು ಬಳಸುವಂತಿಲ್ಲ. ತಟಸ್ಥ ತಂಡವಾಗಿ ಪಾಲ್ಗೊಳ್ಳಬೇಕು‘ ಎಂದು ಸೂಚಿಸಲಾಗಿದೆ.

ಈಗಾಗಲೇ ಯುರೋಪಿನ ಕ್ರೀಡಾ ಫೆಡರೇಷನ್‌ಗಳು ರಷ್ಯಾದ ಎದುರಿನ ಎಲ್ಲ ಕ್ರೀಡಾ ಚಟುವಟಿಕೆಗಳಿಂದ ಹಿಂದೆ ಸರಿದಿವೆ. ರಷ್ಯಾ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸಲು ನಿರಾಕರಿಸಿವೆ.

ಮೇ ನಲ್ಲಿ ನಡೆಯಲಿರುವ ಪುರುಷರ ವಿಶ್ವ ಹಾಕಿ ಚಾಂಪಿಯನ್‌ಷಿಪ್‌ನಿಂದ ರಷ್ಯಾ ಮತ್ತು ಬೆಲಾರೂಸ್ ಹಾಕಿ ತಂಡವನ್ನು ನಿಷೇಧಿಸುವಂತೆ ಫಿನ್ಲೆಂಡ್ ಒತ್ತಾಯಿಸಿದೆ.

ಕತಾರ್‌ನಲ್ಲಿ ನವೆಂಬರ್ 21ರಿಂದ ವಿಶ್ವಕಪ್ ಫುಟ್‌ಬಾಲ್ ಆರಂಭವಾಗಲಿದೆ. ಆ ಟೂರ್ನಿಯಿಂದಲೂ ರಷ್ಯಾ ಮತ್ತು ಬೆಲಾರೂಸ್ ತಂಡಗಳನ್ನು ನಿರ್ಬಂಧಿಸಬೇಕೆಂದು ಕೆಲವು ದೇಶಗಳ ಫೆಡರೇಷನ್‌ಗಳು ಒತ್ತಾಯಿಸಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.