ADVERTISEMENT

ವಿಶ್ವಕಪ್ ಚಿನ್ನ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ನಿಧನ

ಪಿಟಿಐ
Published 28 ಜೂನ್ 2022, 10:35 IST
Last Updated 28 ಜೂನ್ 2022, 10:35 IST
ವರಿಂದರ್ ಸಿಂಗ್‌– ಹಾಕಿ ಇಂಡಿಯಾ ಟ್ವಿಟರ್ ಚಿತ್ರ
ವರಿಂದರ್ ಸಿಂಗ್‌– ಹಾಕಿ ಇಂಡಿಯಾ ಟ್ವಿಟರ್ ಚಿತ್ರ   

ನವದೆಹಲಿ: ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಪದಕಗಳ ವಿಜೇತ ಭಾರತ ಹಾಕಿ ತಂಡದಲ್ಲಿ ಆಡಿದ್ದ ವರಿಂದರ್ ಸಿಂಗ್‌ (75) ಜಲಂಧರ್‌ನಲ್ಲಿ ಮಂಗಳವಾರ ನಿಧನರಾದರು.

ಭಾರತ ತಂಡವು ಕ್ವಾಲಾಲಂಪುರ ನಡೆದ 1975ರ ವಿಶ್ವಕಪ್‌ನ ಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು 2–1ರಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತ್ತು. ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ಜಯಿಸಿದ ಏಕೈಕ ಚಿನ್ನ ಇದು. ಈ ತಂಡವನ್ನು ವರಿಂದರ್ ಪ್ರತಿನಿಧಿಸಿದ್ದರು.

1972ರ ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ ಕಂಚು ಮತ್ತು 1973ರಲ್ಲಿ ಆ್ಯಮ್‌ಸ್ಟರ್‌ಡ್ಯಾಮ್‌ ವಿಶ್ವಕಪ್‌ನಲ್ಲಿ ಬೆಳ್ಳಿ ಜಯಿಸಿದ್ದ ತಂಡದಲ್ಲಿಯೂ ಅವರು ಆಡಿದ್ದರು. 1974 ಮತ್ತು 1978ರ ಏಷ್ಯನ್ ಗೇಮ್ಸ್‌ಗಳಲ್ಲಿ ಬೆಳ್ಳಿ ವಿಜೇತ ಮತ್ತು 1975ರ ಮಾಂಟ್ರಿಯಲ್ ಒಲಿಂಪಿಕ್ಸ್‌ಗಳಲ್ಲಿ ಆಡಿದ್ದ ತಂಡದಲ್ಲಿ ವರಿಂದರ್ ಇದ್ದರು.

ADVERTISEMENT

2007ರಲ್ಲಿ ವರಿಂದರ್ ಅವರಿಗೆಜೀವಮಾನ ಸಾಧನೆಗಾಗಿ ನೀಡುವ ಪ್ರತಿಷ್ಠಿತ ಧ್ಯಾನ್‌ಚಂದ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ವರಿಂದರ್ ಅವರ ನಿಧನಕ್ಕೆ ಹಾಕಿ ಇಂಡಿಯಾ ಸಂತಾಪ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.