ADVERTISEMENT

ಸೈಕ್ಲಿಂಗ್‌ನಲ್ಲಿ ಕೆನ್ನಿ ‘ಕಿಂಗ್‌’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 16:40 IST
Last Updated 8 ಆಗಸ್ಟ್ 2021, 16:40 IST
ಜೇಸನ್‌ ಕೆನ್ನಿ ಅವರು ಪತ್ನಿ ಲೌರಾ ಜೊತೆ ಸಂಭ್ರಮಿಸಿದರು –ರಾಯಿಟರ್ಸ್‌ ಚಿತ್ರ 
ಜೇಸನ್‌ ಕೆನ್ನಿ ಅವರು ಪತ್ನಿ ಲೌರಾ ಜೊತೆ ಸಂಭ್ರಮಿಸಿದರು –ರಾಯಿಟರ್ಸ್‌ ಚಿತ್ರ    

ಟೋಕಿಯೊ: ಪುರುಷರ ಸೈಕ್ಲಿಂಗ್‌ನ ಕೀರಿನ್‌ ವಿಭಾಗದಲ್ಲಿ ಬ್ರಿಟನ್‌ನ ಜೇಸನ್‌ ಕೆನ್ನಿ ಮೋಡಿ ಮಾಡಿದರು.

ಕೊನೆಯ ನಾಲ್ಕು ಲ್ಯಾಪ್‌ಗಳಲ್ಲಿ ವೇಗ ಹೆಚ್ಚಿಸಿಕೊಂಡು ಗುರಿಯತ್ತ ಮುನ್ನುಗ್ಗಿದ ಅವರು ಚಿನ್ನದ ಪದಕ ಕೊರಳಿಗೇರಿಸಿಕೊಂಡರು. ಇದರೊಂದಿಗೆ ಒಲಿಂಪಿಕ್ಸ್‌ ಸೈಕ್ಲಿಂಗ್‌ನಲ್ಲಿ ಏಳು ಚಿನ್ನದ ಪದಕ ಜಯಿಸಿದ ಬ್ರಿಟನ್‌ನ ಮೊದಲ ಕ್ರೀಡಾಪಟು ಎಂಬ ಹಿರಿಮೆಗೂ ಭಾಜನರಾದರು.

ಮಲೇಷ್ಯಾದ ಮಹಮ್ಮದ್‌ ಅಜಿಜುಲ್‌ ಹಸ್ನಿ ಮತ್ತು ನೆದರ್ಲೆಂಡ್ಸ್‌ನ ಹ್ಯಾರಿ ಲ್ಯಾವರೆಸೆನ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ADVERTISEMENT

ವಿಜಯ ವೇದಿಕೆಯಲ್ಲಿ ಮಹಮ್ಮದ್‌ ಮತ್ತು ಹ್ಯಾರಿ, ಚಿನ್ನದ ಸಾಧಕ ಜೇಸನ್‌ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಆ ಮೂಲಕ ಕ್ರೀಡಾ ಸ್ಫೂರ್ತಿ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.