ADVERTISEMENT

2036ರ ಒಲಿಂಪಿಕ್ಸ್‌ಗೆ ಸಿದ್ಧತೆ: ಅಮಿತ್‌ ಶಾ

ಪಿಟಿಐ
Published 18 ಜುಲೈ 2025, 23:49 IST
Last Updated 18 ಜುಲೈ 2025, 23:49 IST
<div class="paragraphs"><p>ಅಮಿತ್ ಶಾ</p></div>

ಅಮಿತ್ ಶಾ

   

ನವದೆಹಲಿ: ಭಾರತ 2036ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದು ಅಂದಾಜು 3,000 ಅಥ್ಲೀಟುಗಳಿಗೆ ತಿಂಗಳಿಗೆ ₹50,000 ದಂತೆ ನೆರವು ಒದಗಿಸಲಿದೆ. ಇದಕ್ಕಾಗಿ ವಿವರವಾದ ಮತ್ತು  ವ್ಯವಸ್ಥಿತವಾದ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಭಾರತ ಆ ಒಲಿಂಪಿಕ್ಸ್‌ನ ಪದಕ ಪಟ್ಟಿಯಲ್ಲಿ ಅಗ್ರ ಐದರಲ್ಲಿ ಸ್ಥಾನ ಪಡೆಯಲಿದೆ ಎಂಬ ವಿಶ್ವಾಸವನ್ನು ಅಮಿತ್‌ ಶಾ ವ್ಯಕ್ತಪಡಿಸಿದರು. ಅವರು 21ನೇ ವಿಶ್ವ ಪೊಲೀಸ್‌ ಮತ್ತು ಅಗ್ನಿಶಾಮಕ ದಳದ ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡವನ್ನು ಗೌರವಿಸಿ
ಮಾತನಾಡಿದರು.

ADVERTISEMENT

ಭಾರತ 2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಈಗಾಗಲೇ ಬಿಡ್‌ ಸಲ್ಲಿಸಿದೆ. ಕಾಮನ್‌ವೆಲ್ತ್‌ ಕ್ರೀಡೆಗಳ ಆತಿಥ್ಯಕ್ಕೂ ಆಸಕ್ತಿಪತ್ರ ಸಲ್ಲಿಸಿದೆ. ಮತ್ತೊಮ್ಮೆ ಏಷ್ಯನ್ ಗೇಮ್ಸ್‌ ಆತಿಥ್ಯಕ್ಕೂ ಯತ್ನಿಸಲಿದೆ ಎಂದು ತಿಳಿಸಿದರು.

ಕ್ರೀಡೆ ಜನಸಾಮಾನ್ಯರ ಜೀವನದ ಭಾಗವಾಬೇಕು ಎಂಬುದು ಈ ಕ್ರೀಡೆಗಳ ಆತಿಥ್ಯ ಪ್ರಯತ್ನದ ಉದ್ದೇಶವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.