ADVERTISEMENT

ಅಥ್ಲೆಟಿಕ್ಸ್‌: ಬೆಳಗಾವಿಯ ವೈಷ್ಣವಿಗೆ ‘ಡಬಲ್‌’ ದಾಖಲೆ

1500 ಮೀ ಓಟದಲ್ಲಿ ಧಾರವಾಡ ‘ಕ್ಲೀನ್‌ ಸ್ವೀಪ್’

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 15:23 IST
Last Updated 24 ಆಗಸ್ಟ್ 2025, 15:23 IST
<div class="paragraphs"><p>23 ವರ್ಷದೊಳಗಿನ ಪುರುಷರ 400 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಬೆಳಗಾವಿಯ ಶ್ರೀನಾಥ್ ಗಣಪತ್‌ (316) ಮತ್ತು ಬೆಳ್ಳಿ ಗಳಿಸಿದ ಭುವನ್ ಪೂಜೇರಿ (303) ಅಂತಿಮ ಗೆರೆಯತ್ತ ಮುನ್ನುಗ್ಗಿದ ರೀತಿ&nbsp;&nbsp;&nbsp; </p></div>

23 ವರ್ಷದೊಳಗಿನ ಪುರುಷರ 400 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದ ಬೆಳಗಾವಿಯ ಶ್ರೀನಾಥ್ ಗಣಪತ್‌ (316) ಮತ್ತು ಬೆಳ್ಳಿ ಗಳಿಸಿದ ಭುವನ್ ಪೂಜೇರಿ (303) ಅಂತಿಮ ಗೆರೆಯತ್ತ ಮುನ್ನುಗ್ಗಿದ ರೀತಿ   

   

ಪ್ರಜಾವಾಣಿ ಚಿತ್ರ; ಉಮೇಶ್ ಮಾರ್ಪಳ್ಳಿ

ಉಡುಪಿ: ಟ್ರ್ಯಾಕ್‌ನಲ್ಲಿ ಮತ್ತೊಮ್ಮೆ ಸಾಮರ್ಥ್ಯ ಪ್ರದರ್ಶಿಸಿದ ಬೆಳಗಾವಿಯ ವೈಷ್ಣವಿ ರಾವಲ್ ಇಲ್ಲಿನ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಮತ್ತು 23 ವರ್ಷದೊಳಗಿನವರ ಅಥ್ಲೆಟಿಕ್ ಕೂಟದಲ್ಲಿ ಎರಡನೇ ದಿನವಾದ ಭಾನುವಾರವೂ ದಾಖಲೆ ಬರೆದು ಚಿನ್ನದ ಒಡತಿಯಾದರು.

ADVERTISEMENT

ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಯೋಜಿಸಿರುವ ಕೂಟದ ಮೊದಲ ದಿನ ವೈಷ್ಣವಿ 20 ವರ್ಷದೊಳಗಿನ ಬಾಲಕಿಯರ 800 ಮೀಟರ್ಸ್ ಓಟದಲ್ಲಿ ದಾಖಲೆ (2ನಿ 12.42 ಸೆ) ಮಾಡಿದ್ದರು. ಭಾನುವಾರ 1500 ಮೀ ಓಟದಲ್ಲಿ ದಾಖಲೆ ಮಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಣತಿ ಮತ್ತು ಧಾರವಾಡದ ಶಿಲ್ಪಾ ರಾಕೇಶ್ ಅವರನ್ನು ಹಿಂದಿಕ್ಕಿದ ಅವರು 4 ನಿಮಿಷ 32.93 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಪ್ರಿಯಾಂಕಾ ಸಿ (4:37.94) ಅವರ ದಾಖಲೆಯನ್ನು ಮುರಿದರು. 

23 ವರ್ಷದೊಳಗಿನವರ ವಿಭಾಗದಲ್ಲಿ ಭಾನುವಾರ 5 ದಾಖಲೆಗಳು ನಿರ್ಮಾಣವಾದವು. ಪುರುಷರ 1500 ಮೀ ಓಟದಲ್ಲಿ ಧಾರವಾಡದ ಕೊರಪಾಟಿ (3ನಿ 57.99ಸೆ) ಲೋಕೇಶ್ ಹೆಸರಿನಲ್ಲಿದ್ದ (3:58.23) ದಾಖಲೆ ಮುರಿದರು. ಹ್ಯಾಮರ್ ಥ್ರೋದಲ್ಲಿ ಕೊಪ್ಪಳದ ಸಚಿನ್ (61.39ಮೀ) ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಉತ್ತಮಪಡಿಸಿಕೊಂಡರು. ಡಿಸ್ಕಸ್ ಥ್ರೋದಲ್ಲಿ ದಕ್ಷಿಣ ಕನ್ನಡದ ನಾಗೇಂದ್ರ ಅಣ್ಣಪ್ಪ (52.77ಮೀ) ತಮ್ಮದೇ ದಾಖಲೆ ಉತ್ತಮಪಡಿಸಿಕೊಂಡರು. ಪೋಲ್‌ವಾಲ್ಟ್‌ನಲ್ಲಿ ಬೆಂಗಳೂರಿನ ಆದಿತ್ಯ ವಿ.ಎಂ (4.20) ಲೋಕೇಶ್ ರಾಥೋಡ್ (3.90ಮೀ) ಅವರ ದಾಖಲೆ ಮುರಿದರು. ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ದಕ್ಷಿಣ ಕನ್ನಡದ ಸಿಂಚನಾ ಎಂ.ಎಸ್‌ (6.02ಮೀ) ಶ್ರೀದೇವಿಕಾ ವಿ.ಎಸ್ (5.76) ಅವರ ದಾಖಲೆ ಹಿಂದಿಕ್ಕಿದರು. 20 ವರ್ಷದೊಳಗಿನ ಪುರುಷರ 1500 ಮೀ ಓಟದಲ್ಲಿ ದಕ್ಷಿಣ ಕನ್ನಡದ ರಂಗಣ್ಣ ನಾಯಕ (3:52.05) ಶಶಿಧರ್‌ ಬಿ.ಎಲ್‌ (4:00.7) ದಾಖಲೆಯನ್ನು ಮೀರಿದರು.

23 ವರ್ಷದೊಳಗಿನವರ ಫಲಿತಾಂಶಗಳು:

ಪುರುಷರು: 400 ಮೀ ಓಟ: ಶ್ರೀನಾಥ್ ಗಣಪತ್ (ಬೆಳಗಾವಿ)–1. ಕಾಲ: 48.14ಸೆ, ಭುವನ್ ಪೂಜೇರಿ (ಬೆಳಗಾವಿ)_2, ಸ್ಯಾಮ್ಯುಯೆಲ್‌ (ಬೆಂಗಳೂರು)_3; 1500 ಮೀ ಓಟ: ಕೊರಪಾಟಿ (ಧಾರವಾಡ)–1. ಕಾಲ: 3ನಿ 57.99ಸೆ, ಬಾಲು (ಧಾರವಾಡ)–2, ಸಂಗಮೇಶ್ (ಧಾರವಾಡ)–3; 110 ಮೀ ಹರ್ಡಲ್ಸ್‌: ಕೃಷಿಕ್‌ ಎಂ (ತುಮಕೂರು)–1. ಕಾಲ: 14.72ಸೆ, ಸಂತೋಷ್ ಕುಮಾರ್ (ಬೆಂಗಳೂರು)–2, ಈಶ್ವರ್‌ ಗೌಡ (ಉತ್ತರ ಕನ್ನಡ)–3; ಟ್ರಿಪ್ ಜಂಪ್‌: ಜಾಫರ್ ಖಾನ್ ಮೊಹಮ್ಮದ್ (ಬೆಳಗಾವಿ)–1. ಅಂತರ: 14.55ಮೀ, ರಮೇಶ್ ನಾಯಕ (ಮೈಸೂರು)–2, ಯಶಸ್ ಗೌಡ (ಮೈಸೂರು)–3; ಹ್ಯಾಮರ್ ಥ್ರೋ: ಸಚಿನ್ (ಕೊಪ್ಪಳ)–1. ದೂರ: 61.39ಮೀ, ಧೀರಜ್‌ ಪೂಜಾರಿ (ಉಡುಪಿ)–2, ಸುದೀಪ್‌ ಎಸ್‌.ಎಂ (ಶಿವಮೊಗ್ಗ)–3; ಡಿಸ್ಕಸ್ ಥ್ರೋ: ನಾಗೇಂದ್ರ ಅಣ್ಣಪ್ಪ (ದಕ್ಷಿಣ ಕನ್ನಡ)–1. ದೂರ: 52.77ಮೀ, ಮೋಹನ್ ಕುಮಾರ್ (ಬೆಂಗಳೂರು)–2, ಪ್ರೀತಂ ರಜಪೂತ್‌ (ವಿಜಯಪುರ)–3; ಪೋಲ್‌ವಾಲ್ಟ್‌: ಆದಿತ್ಯ ವಿ (ಬೆಂಗಳೂರು)–1. ಎತ್ತರ: 4.20ಮೀ, ಮೊಹಮ್ಮದ್ ಆಸಿಫ್‌ (ಶಿವಮೊಗ್ಗ)–2; ಡೆಕಾಥ್ಲಾನ್‌: ಬಿ.ಎಸ್.ಸನತ್ (ದಕ್ಷಿಣ ಕನ್ನಡ)–1. ಪಾಯಿಂಟ್ಸ್‌: 5371, ಲೋಹಿಯಾ (ಬೆಂಗಳೂರು)–2, ತ್ರಿಲೋಕ್ ಒಡೆಯರ್ (ಯಾದಗಿರಿ)–3.

ಮಹಿಳೆಯರು: 400 ಮೀ ಓಟ: ಮಾನಸ (ಕೊಡಗು)–1. ಕಾಲ: 57.66ಸೆ, ರೇಖಾ ಬಸಪ್ಪ ಪೈರೋಜಿ (ದಕ್ಷಿಣ ಕನ್ನಡ)–2, ಶ್ರಾವಣಿ ಸತೀಶ್ ಭಟ್ (ದಕ್ಷಿಣ ಕನ್ನಡ)–3; 1500 ಮೀ ಓಟ: ಶ್ರೇಯಾ (ದಕ್ಷಿಣ ಕನ್ನಡ)–1. ಕಾಲ: 5ನಿ12.69ಸೆ, ಸುಜಾತಾ ಲಮಾಣಿ (ಉಡುಪಿ)–2; 100 ಮೀ ಹರ್ಡಲ್ಸ್‌: ಶ್ರೀಯಾ ರಾಜೇಶ್ (ಬೆಂಗಳೂರು)–1. ಕಾಲ: 14.45ಸೆ; ಲಾಂಗ್‌ ಜಂಪ್‌: ಸಿಂಚನಾ (ದಕ್ಷಿಣ ಕನ್ನಡ)–1. ಅಂತರ: 6.02ಮೀ, ದೀಶಾ (ಮೈಸೂರು)–2, ಐಶ್ವರ್ಯಾ ಪಾಟೀಲ (ಉಡುಪಿ)–3; ಜಾವೆಲಿನ್ ಥ್ರೋ: ಶ್ರಾವ್ಯಾ (ಉಡುಪಿ)–1. ದೂರ: 41.76 ಮೀ, ಜೀವಿತಾ (ದಕ್ಷಿಣ ಕನ್ನಡ)–2, ಮುಸ್ಕಾನ್ ಸುಬೇದಾರ್ (ಬಾಗಲಕೋಟೆ)–3; ಹ್ಯಾಮರ್ ಥ್ರೋ: ನಿಶೆಲ್‌ (ದಕ್ಷಿಣ ಕನ್ನಡ)–1. ದೂರ: 40.01ಮೀ, ರೇವತಿ ಚಂದ್ರ (ಉಡುಪಿ)–2, ಖುಷಿ ಸಾಲ್ಯಾನ್‌ (ದಕ್ಷಿಣ ಕನ್ನಡ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.