ADVERTISEMENT

ಆನ್‌ಲೈನ್‌ ಚೆಸ್‌: ₹ 4 ಲಕ್ಷ ಸಂಗ್ರಹ

ಪಿಟಿಐ
Published 4 ಮೇ 2020, 19:45 IST
Last Updated 4 ಮೇ 2020, 19:45 IST

ಚೆನ್ನೈ: ಚೆಸ್ ಕೇರಳ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಆನ್‌ಲೈನ್‌ ಬ್ಲಿಟ್ಜ್‌ ಟೂರ್ನಿಯ ಮೂಲಕ ಕೇರಳ ಸಿಎಂ ಪರಿಹಾರ ನಿಧಿಗೆ ₹ 4 ಲಕ್ಷ ದೇಣಿಗೆ ನೀಡಲಾಗಿದೆ. ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಇದನ್ನು ಬಳಸಲಾಗುತ್ತದೆ. ‘ದ ಚೆಕ್‌ಮೇಟ್‌ ಕೋವಿಡ್‌–19 ಬ್ಲಿಟ್ಜ್‌ ಓಪನ್’‌ ಹೆಸರಿನಲ್ಲಿ ನಡೆದ ಈ ಟೂ‌ರ್ನಿಯಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಎಸ್‌.ಎಲ್‌.ನಾರಾಯಣನ್‌ ಚಾಂಪಿಯನ್‌ ಆದರು.

ನಾರಾಯಣನ್‌ ಹಾಗೂ ಎರಡನೇ ಸ್ಥಾನ ಗಳಿಸಿದ ಕಾಮನ್‌ವೆಲ್ತ್‌ ಚಾಂಪಿಯನ್‌ ಅಭಿಜಿತ್‌ ಗುಪ್ತಾ ಅವರು ಕ್ರಮವಾಗಿ ₹ 12,000 ಹಾಗೂ ₹ 8,000 ನಗದು ಗೆದ್ದರು. ತಮ್ಮ ಬಹುಮಾನ ಮೊತ್ತವನ್ನು ಕೋವಿಡ್‌–19 ಸಂತ್ರಸ್ತರಿಗೆ ನೀಡುವುದಾಗಿ ಪ್ರಕಟಿಸಿದರು.

ಭಾರತ, ರಷ್ಯಾ, ಅಮೆರಿಕ, ಅರ್ಜೆಂಟೀನಾ, ಚಿಲಿ, ಪೆರು, ಇಂಗ್ಲೆಂಡ್‌ ಸೇರಿದಂತೆ ವಿವಿಧ ದೇಶಗಳ 429 ಆಟಗಾರರು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.