
ಪ್ರಜಾವಾಣಿ ವಾರ್ತೆ
ಲಾಹೋರ್: ಸಾಂಘಿಕ ಆಟ ಪ್ರದರ್ಶಿಸಿದ ಪಾಕಿಸ್ತಾನ ತಂಡವು ಎಂಟು ವರ್ಷಗಳ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡವನ್ನು ಟಿ20 ಪಂದ್ಯದಲ್ಲಿ ಸೋಲಿಸಿತು.
ಗುರುವಾರ ನಡೆದ ಪಂದ್ಯದಲ್ಲಿ ಪಾಕ್ ತಂಡವು 22 ರನ್‌ಗಳ ಗೆಲುವು ಸಾಧಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವು ಸೈಮ್ ಅಯೂಬ್ (40) ಮತ್ತು ನಾಯಕ ಸಲ್ಮಾನ್ ಆಘಾ (39) ಅವರ ಆಟದ ನೆರವಿನಿಂದ 8 ವಿಕೆಟ್‌ಗೆ 168 ರನ್ ಗಳಿಸಿತು. ಟ್ರಾವಿಸ್ ಹೆಡ್ ನಾಯಕತ್ವದ ತಂಡವು 8 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.