ಪಂಕಜ್ ಅಡ್ವಾನಿ
ಇಂದೋರ್: ಕೌಶಲ ಮತ್ತು ಛಲದ ಆಟವಾಡಿದ ದೇಶದ ಯಶಸ್ವಿ ಆಟಗಾರ, ಕರ್ನಾಟಕದ ಪಂಕಜ್ ಅಡ್ವಾನಿ ಅವರು ಇಲ್ಲಿನ ಯಶವಂತ್ ಕ್ಲಬ್‌ಲ್ಲಿ ನಡೆದ 10ನೇ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಇದು ಅವರಿಗೆ ಒಟ್ಟಾರೆ 36ನೇ ರಾಷ್ಟ್ರೀಯ ಪ್ರಶಸ್ತಿ.
ಒಎನ್‌ಜಿಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಕಜ್ ಅವರು ಫೈನಲ್‌ನಲ್ಲಿ ಬ್ರಿಜೇಶ್ ದಮಾನಿ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದರು. ಆದರೆ ಮೊದಲ ಫ್ರೇಮ್ ಗೆದ್ದ ನಂತರ ದಮಾನಿ ಆಟ ನಡೆಯಲಿಲ್ಲ. ಬೆಂಗಳೂರಿನ ಅಧಿಕಾರಯುತ ಪ್ರದರ್ಶನ ನೀಡಿದರು.
ಅಡ್ವಾನಿ ಸ್ಥಿರ ಮತ್ತು ಕರಾರುವಾಕ್ ಆಟ ಪ್ರದರ್ಶಿಸಿದರು. ಏಕಾಗ್ರತೆಯನ್ನು ಕಾಪಾಡಿಕೊಂಡ ಅವರು ಟೇಬಲ್ ಮೇಲಿನ ಹಿಡಿತ ಸಾಧಿಸಿ, ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಿದರು. ಅಂತಿಮ ಫ್ರೇಮ್‌ನಲ್ಲಿ 84ರ ಸ್ಫೂರ್ತಿಯುತ ಬ್ರೇಕ್ ಪಡೆದರು.
ಈ ಚಾಂಪಿಯನ್‌ಷಿಪ್ ಏಷ್ಯಾ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗೆ ಇದು ಏಕೈಕ ಆಯ್ಕೆ ಟ್ರಯಲ್ಸ್ ಆಗಿದೆ.
ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್ ಇದೇ 15ರಿಂದ ದೋಹಾದಲ್ಲಿ ನಡೆಯಲಿದ್ದು, ಅಲ್ಲಿ ಅಡ್ವಾನಿ ಮತ್ತು ದಮಾನಿ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.