ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: 2.20 ಲಕ್ಷ ಕಾಂಡೋಮ್‌ ಉಚಿತ ವಿತರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 15:33 IST
Last Updated 20 ಮಾರ್ಚ್ 2024, 15:33 IST
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ
ಪ್ಯಾರಿಸ್‌ ಒಲಿಂಪಿಕ್ಸ್‌ ಲೋಗೊ   

ಪ್ಯಾರಿಸ್‌: ‘ಸಿಟಿ ಆಫ್‌ ಲವ್‌’ ಖ್ಯಾತಿಯ ಪ್ಯಾರಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ ವೇಳೆ ರೋಮ್ಯಾಂಟಿಕ್ ಆಗಬಯಸುವ ಕ್ರೀಡಾಪಟುಗಳಿಗಾಗಿ 2.20 ಲಕ್ಷ ಕಾಂಡೋಮ್‌ಗಳನ್ನು ವಿತರಿಸಲು ಸಂಘಟಕರು ನಿರ್ಧರಿಸಿದ್ದಾರೆ.

ಅಥ್ಲೀಟ್‌ಗಳು ತಮ್ಮ ಗಮನವನ್ನು ಕ್ರೀಡೆಯ ಮೇಲೆ ಕೇಂದ್ರೀಕರಿಸಬಹುದಾದರೂ, ‌ಅವರು ಬಯಸಿದಲ್ಲಿ ಲೈಂಗಿಕತೆಯಲ್ಲಿ ತೊಡಗಲು ಮುಕ್ತರಾಗಿರುತ್ತಾರೆ. ಟೋಕಿಯೊ ಒಲಿಂಪಿಕ್ಸ್‌ ವೇಳೆ ಕೋವಿಡ್‌ ಆತಂಕ ಇದ್ದ ಕಾರಣ ಕಾಂಡೋಮ್‌ ವಿತರಣೆ ನಡೆದಿರಲಿಲ್ಲ.

ಜುಲೈ 26ರಿಂದ ಆಗಸ್ಟ್ 11 ರವರೆಗೆ ಒಲಿಂಪಿಕ್ಸ್ ನಡೆಯಲಿದ್ದು, ಈ ವೇಳೆ ಪುರುಷರಿಗೆ ಸುಮಾರು 2 ಲಕ್ಷ ಮತ್ತು ಮಹಿಳೆಯರಿಗೆ 20 ಸಾವಿರ ಕಾಂಡೋಮ್‌ಗಳು ಲಭ್ಯವಾಗಲಿವೆ. ನಂತರದಲ್ಲಿ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಲಾಗುವುದು ಎಂದು ಪ್ಯಾರಿಸ್ ಒಲಿಂಪಿಕ್ಸ್‌ನ ಪ್ರಥಮ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳ ಉಸ್ತುವಾರಿ ಲಾರೆಂಟ್ ದಲಾರ್ಡ್ ಮಾಹಿತಿ ನೀಡಿದ್ದಾರೆ.

ADVERTISEMENT

ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸಲು ಮತ್ತು ಎಚ್‌ಐವಿ– ಏಡ್ಸ್‌ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಲು ಮೊದಲ ಬಾರಿ 1988ರಲ್ಲಿ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾಪಟುಗಳಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ನಂತರ ಪ್ರತಿ ಕೂಟದಲ್ಲೂ ಈ ಸಂಪ್ರದಾಯ ಮುಂದುವರಿದಿದೆ. 2016ರ ರಿಯೊ ಒಲಿಂಪಿಕ್ಸ್‌ ವೇಳೆ 4.50 ಲಕ್ಷ ಕಾಂಡೋಮ್‌ಗಳನ್ನು ಹಂಚಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.